ಗುರುವಾರ , ಜೂನ್ 24, 2021
27 °C
ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಅವ್ಯವಹಾರ?

ಕಂಪ್ಯೂಟರ್‌ ಖರೀದಿ ಹಣ ಗುಳುಂ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ 28 ವ್ಯವಸಾಯ ಸೇವಾ ಸಹಕಾರ ಸಂಘಗಳ ಪೈಕಿ 20 ಸಂಘಗಳಿಗೆ ಪ್ರತಿ ಕೇಂದ್ರಕ್ಕೆ ₨1.24 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್‌ ಖರೀದಿ ಹೆಸರಿನಲ್ಲಿ ಲಕ್ಷಾಂತರ ಹಣ ದುರ್ಬಳಕೆಯಾಗಿದೆ. ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಪ ನಿಬಂಧಕರು ಅಕ್ರಮಕ್ಕೆ ಶಾಮೀಲಾಗಿದ್ದಾರೆ ಎಂದು ಪ್ರಾಂತ ರೈತ ಸಂಘದ ಮುಖಂಡ ಸಿದ್ದಯ್ಯ ಹಿರೇಮಠ ಆರೋಪಿಸಿದ್ದಾರೆ.2010–11 ಸಾಲಿನಲ್ಲಿ  ತಾಲ್ಲೂಕಿನ 20 ಕೇಂದ್ರ ಗಳಿಗೆ ₨1.24 ಲಕ್ಷ ವೆಚ್ಚದಲ್ಲಿ  ಕಂಪ್ಯೂಟರ್‌  ಹಾಗೂ ಸಿಸ್ಟಮ್‌ ಮತ್ತು ಇತರ ಸಾಮಗ್ರಿಗಳನ್ನು ಅಳವಡಿಸಲು ಪರವಾನಗಿ ನೀಡುವಂತೆ ತಾಲ್ಲೂಕಿನ ಚಾಮನಾಳ ವ್ಯವಸಾಯ ಸೇವಾ ಸಹಕಾರ ಸಂಘ ಸೇರಿದಂತೆ ಆಯಾ ಸಂಘದ ಕಾರ್ಯದರ್ಶಿಯವರು ಜಿಲ್ಲೆಯ ಸಹಕಾರ ಸಂಘದ ಉಪ ನಿಬಂಧಕರಿಗೆ 2010 ನವೆಂಬರ್‌ 5 ರಂದು ಮನವಿ ಸಲ್ಲಿಸಿದ್ದರು. ಅದರಂತೆ ಜಿಲ್ಲಾ ನಿಬಂಧಕರು 2010 ಡಿಸೆಂಬರ್ 1ರಂದು ಕಂಪ್ಯೂಟರ್‌ ಖರೀದಿಗೆ ಪರವಾನಿಗೆ ನೀಡಿದ್ದಾರೆ.ಸಹಕಾರ ಸಂಘದ ಜಿಲ್ಲಾ ನಿಬಂಧಕರ ಅನುಮತಿ ಯಂತೆ ಬೆಂಗಳೂರಿನ ಎಸ್‌.ಎಸ್‌.ಟೆಕ್ನಿಕೋಪಾರ್ಕ್ ಅಂಗಡಿಯಲ್ಲಿ ₨65,000 ಗುಲ್ಬರ್ಗ ಮಿತ್ರ ಕಂಪ್ಯೂ ಟರ್‌ ಮಳಿಗೆಯಲ್ಲಿ ಡೆಸ್ಕ್‌ಟಾಪ್‌ ಜೊತೆ ಎಲ್‌ಸಿಡಿ ಮಾನಿಟರ್‌ ₨37,900 ಹಾಗೂ ಯುಪಿಎಸ್‌ ಬ್ಯಾಟರಿ ₨21,920 ಹೀಗೆ ಒಟ್ಟು ₨1,24,820 ಖರೀದಿಸಲಾಗಿದೆ ಎಂದು ಲೆಕ್ಕದಲ್ಲಿ ತೋರಿಸಲಾಗಿದೆ.‘ಇಂದಿಗೂ ಸಂಘದ ಕಚೇರಿಗೆ ಸಿಸ್ಟಮ್ ಬಂದಿಲ್ಲ. ದಾಖಲೆಗಳಲ್ಲಿ ಮಾತ್ರ ಕಂಪ್ಯೂಟರ್‌ ಅಳವಡಿಸಿದ ಬಗ್ಗೆ ನಮೂದಿಸಲಾಗಿದೆ. ಉನ್ನತಮಟ್ಟದ ಸ್ಥಳ ಪರಿಶೀಲನೆ ಅಗತ್ಯವಾಗಿದೆ. ಗುಲ್ಬರ್ಗ ಹಾಗೂ ಯಾದಗಿರಿ ಯಾವ ಜಿಲ್ಲೆಯ ತಾಲ್ಲೂಕು ಕೇಂದ್ರ ಗಳಲ್ಲಿ  ಕಂಪ್ಯೂಟರ್‌ ಖರೀದಿಸಿಲ್ಲ. ಕೇವಲ ಶಹಾಪು ರದ 20 ಕೇಂದ್ರಗಳಲ್ಲಿ ಮಾತ್ರ ಖರೀದಿ ವ್ಯವಹಾರ ಕುದರಿಸಿದ್ದಾರೆ’ ಎಂದು ಅವರು ದೂರಿದ್ದಾರೆ.‘ಕಂಪ್ಯೂಟರ್‌ ಖರೀದಿ ಹಗರಣ ಶಂಕೆಯ ಬಗ್ಗೆ ಆರಂಭದಲ್ಲೆ ಮಾಧ್ಯಮಗಳಲ್ಲಿ ವರದಿ ಬಂದಾಗ ಎಚ್ಚೆತ್ತಕೊಂಡ ಸಹಕಾರ ಸಂಘದ ಜಿಲ್ಲಾ ಉಪನಿಬಂಧಕರು ತನಿಖೆ ನೆಪ ಮಾಡಿದರು. ಪ್ರತಿ ಸಂಘದ ಕಾರ್ಯದರ್ಶಿಯ ಮೂಲಕ  ಇಂತಿಷ್ಟು ಕಪ್ಪುಕಾಣಿಕೆ ಪಡೆದು ಈಗ ಮೌನವಹಿಸಿ ಅಕ್ರಮಕ್ಕೆ ಸಾಥ್‌ ನೀಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.‘ಸರ್ಕಾರದ ಯಾವುದೇ ಸುತ್ತೋಲೆಯಿಲ್ಲದೆ ದುಬಾರಿ ಬೆಲೆಯ ಲಕ್ಷಾವಧಿ ಮೌಲ್ಯದ ಕಂಪ್ಯೂಟರ್‌ ಖರೀದಿಗೆ ಪರವಾನಗಿ ನೀಡಿದ ಅಧಿಕಾರಿ ಹಾಗೂ ಸಂಘದ ಕಾರ್ಯದರ್ಶಿಯ ವಿರುದ್ಧ ವಂಚನೆಯ ದೂರು ದಾಖಲಿಸಿ. ಅಧಿಕಾರ ದುರ್ಬಳಕೆ ಮಾಡಿಕೊಂಡು ಖರೀದಿಯ ಹೆಸರಿನಲ್ಲಿ ಹಣ ದುರುಪಯೋಗಪ ಡಿಸಿಕೊಂಡ ಅಂದಿನ ಜಿಲ್ಲಾ ಉಪ ನಿಬಂಧಕರನ್ನು ತಕ್ಷಣ ಅಮಾನತುಗೊಳಿಸಿ’ ಎಂದು ಸಿದ್ದಯ್ಯ ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.