ಕಂಪ್ಯೂಟರ್ ತಂತ್ರಜ್ಞಾನ: ದೇಶ ಪ್ರಗತಿ ಸಾಧಿಸಲಿ

7

ಕಂಪ್ಯೂಟರ್ ತಂತ್ರಜ್ಞಾನ: ದೇಶ ಪ್ರಗತಿ ಸಾಧಿಸಲಿ

Published:
Updated:
ಕಂಪ್ಯೂಟರ್ ತಂತ್ರಜ್ಞಾನ: ದೇಶ ಪ್ರಗತಿ ಸಾಧಿಸಲಿ

ಕೂಡ್ಲಿಗಿ: ನಮ್ಮ ದೇಶ ಜಗತ್ತಿಗೆ ಹಲವಾರು ಮಹತ್ವದ ಕೊಡುಗೆಗಳನ್ನು ನೀಡಿದೆ, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ದೇಶ ಇನ್ನೂ ಪ್ರಗತಿಯನ್ನು ಸಾಧಿಸಿ ಜಗತ್ತಿನಲ್ಲಿ ಮೊದಲ ಸ್ಥಾನ ಪಡೆಯಲಿ ಎಂದು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಎಸ್.ಪಾಟೀಲ್ ಆಶಿಸಿದರು.ಅವರು ಬುಧವಾರ ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸ ಲಾಗಿದ್ದ ವಕೀಲರ ವೃತ್ತಿಯಲ್ಲಿ ತಂತ್ರಜ್ಞಾನದ ಬಳಕೆ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಗಣಿತ ಶಾಸ್ತ್ರದಲ್ಲಿ ಭಾರತ ತನ್ನದೇ ಆದ ಕೊಡುಗೆ ನೀಡಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ, ನೆಮ್ಮದಿಯ ಬದುಕನ್ನು ಅನ್ಯದೇಶಗಳು ಅನುಕರಿಸುತ್ತಿವೆ. ಹಾಗೆಯೇ ಕಂಪ್ಯೂಟರ್ ತಂತ್ರಜ್ಞಾನ ದಲ್ಲೂ ಸಾಧನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.ಚೀನಾ ಈ ದಿಸೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಅಮೆರಿಕಾ ದ್ವಿತೀಯ ಸ್ಥಾನದಲ್ಲಿದೆ. ನಮ್ಮಲ್ಲಿರುವ ಪ್ರತಿಭೆಗಳ ಮೂಲಕ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಶ್ರಮಿಸ ಬೇಕಾಗಿದೆ ಎಂದು ಅವರು ಕರೆ ನೀಡಿದರು.ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ವಕೀಲರನ್ನು ಪ್ರತಿನಿಧಿಸಿರುವ ಮಹಾತ್ಮ ಗಾಂಧೀಜಿ ಯವರು ಇಡೀ ಪ್ರಪಂಚಕ್ಕೆ ಆದರ್ಶಮಯರಾಗಿದ್ದಾರೆ ಎಂಬುದನ್ನು ನಾವು ಮರೆಯಬಾರದು ಎಂದರು.ವಕೀಲರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಕರ್ತವ್ಯ ನಿಷ್ಠೆಯನ್ನು ಹೊಂದಿದ ವಕೀಲರು ಹೆಚ್ಚಿನ ಸಾಧನೆ ಯನ್ನೂ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.ಕೇವಲ 10 ವರ್ಷದೊಳಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ಗಣಕೀಕೃತಗೊಳ್ಳಲಿದೆ ಎಂದು ಅವರು ತಿಳಿಸಿದರು.ಪ್ರಪಂಚದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಾಂತ್ರಿಕ ಕ್ರಾಂತಿಯಾಗಿ ರುವ ಹೆಗ್ಗಳಿಗೆ ಚೀನಾಕ್ಕಿದೆ, ನಮ್ಮ ದೇಶದ ಪ್ರತಿಭೆಗಳೂ ಪ್ರಯತ್ನಿಸಿದಲ್ಲಿ ಅದರ ಸರಿಸಾಟಿಯಾಗಬಲ್ಲುದು ಎಂದು ಅವರು ಅಭಿಪ್ರಾಯಪಟ್ಟರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಎಸ್.ಕುಲಕರ್ಣಿ, ವಕೀಲರು ಸಮಾಜದ ವೈದ್ಯರಿದ್ದಂತೆ, ನ್ಯಾಯ ಒದಗಿಸುವಲ್ಲಿ ಅವರ ಪಾತ್ರ ಹಿರಿದು ಎಂದು ಅವರು ತಿಳಿಸಿದರು.ಕಂಪ್ಯೂಟರ್‌ಗಳಿಂದ ಕಾರ್ಯದ ಒತ್ತಡ ಕಡಿಮೆಯಾಗುತ್ತದೆ, 5 ಜನ ಕಾರ್ಯನಿರ್ವಹಿಸುವದನ್ನು ಒಂದು ಕಂಪ್ಯೂಟರ್ ನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು. ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ನಮ್ಮ ಅಧೀನ ದಲ್ಲಿದೆ, ಅದನ್ನು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಅವರನ್ನು ಸನ್ಮಾನಿಸ ಲಾಯಿತು.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದ್ಯಾಪಕರಾದ ಡಾ.ಅರುಂಧತಿ ಕುಲಕರ್ಣಿ, ಸಂಶೋಧಕರಾದ ಭೀಮಾ ಬಾಯಿ ಮುಗಳೆ, ತನ್ಮಯ ಪಾಟೀಲ್ ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ಪರದೇಶಿ, ವಕೀಲರ ಸಂಘದ  ಎ. ಶಿವರಾಜ್ ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಹೊ.ಮ.ಪಂಡಿತಾರಾಧ್ಯ ವಹಿಸಿದ್ದರು. ವಕೀಲರ ಸಂಘದ ಎಚ್. ಗುರುರಾಜರಾವ್, ಎಂ.ನಾಗರಾಜ್, ಟಿ.ಮಲ್ಲಿಕಾರ್ಜುನ, ಎಚ್.ವೆಂಕಟೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಭ್ರಮರಾಂಬಾ ಪ್ರಾರ್ಥಿಸಿದರು. ಶಿವರಾಜ ಅಂಗಡಿ ಸ್ವಾಗತಿಸಿದರು. ವಿರೂಪಾಕ್ಷಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry