ಕಂಪ್ಯೂಟರ್ ಬಳಕೆ ಮಿತವಾಗಿರಲಿ

7

ಕಂಪ್ಯೂಟರ್ ಬಳಕೆ ಮಿತವಾಗಿರಲಿ

Published:
Updated:

ದಿನಕ್ಕೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಕಂಪ್ಯೂಟರ್ ಪರದೆ ಎದುರು ಕಳೆಯುವವರು ಹೃದಯ ಬೇನೆ ಎದುರಿಸುವ ಸಾಧ್ಯತೆಗಳು ಶೇ 125ರಷ್ಟು ಹೆಚ್ಚಂತೆ. ದಿನವೊಂದಕ್ಕೆ ಎರಡು ಅಥವಾ ಅದಕ್ಕಿಂತ ಕಡಿಮೆ ಸಮಯವನ್ನು ಕಂಪ್ಯೂಟರ್ ಮುಂದೆ ಕಳೆಯುವುದು ಹೆಚ್ಚು ಸುರಕ್ಷಿತ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.   ಕಂಪ್ಯೂಟರ್‌ಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಳಕೆದಾರರು ಪ್ರತಿ 20 ನಿಮಿಷ ಅಥವಾ ಅರ್ಧಗಂಟೆಗೊಮ್ಮೆ ಕಂಪ್ಯೂಟರ್ ಪರದೆ ಎದುರಿನಿಂದ ಸರಿಯಬೇಕು. ದೃಷ್ಟಿ ಬೇರೆಡೆ ಹರಿಸಬೇಕು. ಕೆಲ ಹೆಜ್ಜೆಗಳಷ್ಟು ದೂರ ನಡೆಯಬೇಕು. ಹೀಗೆ ನಿಯಮಿತ ಅಂತರದಲ್ಲಿ ಕಂಪ್ಯೂಟರ್ ಪರದೆಯಿಂದ ದೂರ ಸರಿಯುವುದರಿಂದ ಆರೋಗ್ಯದ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳ ತೀವ್ರತೆ ತಗ್ಗಿಸಬಹುದು ಎಂದೂ ಸಂಶೋಧಕರು ಸಲಹೆ ನೀಡಿದ್ದಾರೆ.ಬ್ರಾಡಬ್ಯಾಂಡ್: ಕಳಪೆ ಗುಣಮಟ್ಟ

 ಇಲ್ಲದ ವೇಗ ದೇಶಿ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಗಳು ಹೇಳಿಕೊಳ್ಳುವ ಮತ್ತು ಜಾಹೀರಾತಿನಲ್ಲಿ ನೀಡಿರುವ ಭರವಸೆ ಪ್ರಕಾರ, ಇಂಟರ್‌ನೆಟ್ ಸೇವೆಯ ವೇಗ ಇರುವುದಿಲ್ಲ ಎನ್ನುವುದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಜಾಹೀರಾತಿನಲ್ಲಿ ತಿಳಿಸಿದ ವೇಗದ ಶೇ 80ರಷ್ಟನ್ನೂ ಇಂಟರ್‌ನೆಟ್ ಸೇವಾ ಸಂಸ್ಥೆಗಳು ಒದಗಿಸುವುದಿಲ್ಲವಂತೆ.  ದೇಶದಲ್ಲಿನ ಇಂಟರ್‌ನೆಟ್ ಸೇವಾ ಸಂಸ್ಥೆಗಳ ಗುಣಮಟ್ಟದ ಸೇವೆ ಮೇಲೆ ಈ ಅಧ್ಯಯನ ಬೆಳಕು ಚೆಲ್ಲುತ್ತದೆ. ಶ್ರೀಲಂಕಾ ಮೂಲದ  ಲರ್ನ್ ಏಷ್ಯಾ ಸಂಸ್ಥೆಯು ಇಂಟರ್‌ನೆಟ್ ಸೇವಾ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಿದೆ. ದತ್ತಾಂಶ, ಮಾಹಿತಿ ಇಳಿಸಿಕೊಳ್ಳುವ ಮಾಹಿತಿ ರವಾನಿಸುವ ಮತ್ತು  ದತ್ತಾಂಶಗಳು ನಿಗದಿತಗುರಿ ತಲುಪುವಲ್ಲಿ ವಿಫಲವಾಗುವುದರಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಆದರೆ, ಗ್ರಾಹಕರು ನೀಡುವ ಹಣಕ್ಕೆ ತಕ್ಕ ಸೇವೆ ನೀಡುವಲ್ಲಿ ಭಾರತದ ಇಂಟರ್‌ನೆಟ್ ಸೇವಾ ಸಂಸ್ಥೆಗಳು ನೆರೆಹೊರೆಯ ದೇಶದ ಸಂಸ್ಥೆಗಳಿಗಿಂತ ಉತ್ತಮ ಸೇವೆ ನೀಡುತ್ತಿವೆ. ಬ್ರಾಡ್‌ಬ್ಯಾಂಡ್ ಸೇವೆಯ ಗುಣಮಟ್ಟ ಸುಧಾರಣೆಗೆ ಇನ್ನೂ ಸಾಕಷ್ಟು ಅವಕಾಶ ಇದೆ ಎಂದೂ ಅಧ್ಯಯನ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry