ಭಾನುವಾರ, ಮೇ 22, 2022
21 °C

ಕಂಪ್ಯೂಟರ್, ಮೊಬೈಲ್‌ನಿಂದ ಓದುವ ಹವ್ಯಾಸಕ್ಕೆ ಕುತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ಮನುಷ್ಯನ ಅತಿ ದೊಡ್ಡ ಆಸ್ತಿಯೆಂದರೆ ಜ್ಞಾನ ಸಂಪತ್ತು. ಅದನ್ನು ಪುಸ್ತಕ ಓದುವ ಮೂಲಕ ಪಡೆದುಕೊಳ್ಳಬಹುದು. ಜನರು ಉತ್ತಮ ಕೃತಿಗಳನ್ನು ಆಯ್ಕೆಮಾಡಿ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್ ಸಲಹೆ ನೀಡಿದರು.ನಗರದ ಕೆ.ಎಂ.ಸಿ. ಮುಖ್ಯರಸ್ತೆಯ ಬಲಭಾಗದಲ್ಲಿರುವ ಟಿ.ಎಂ.ಎ.ಪೈ ಗಾರ್ಡನ್ ಬಳಿ ಇತ್ತೀಚೆಗೆ ಯುನಿವರ್ಸಲ್ ಮಾರಾಟ ಮಳಿಗೆ ಹಾಗೂ 60 ದಿನಗಳ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಅತಿಥಿಯಾಗಿದ್ದ ಜಾನಪದ ತಜ್ಞ ಬನ್ನಂಜೆ ಬಾಬು ಅಮೀನ್ ಮಾತನಾಡಿ, ಇಂದಿನ    ಜನಾಂಗಕ್ಕೆ ಕಂಟ್ಯೂಟರ್ ಮತ್ತು ಮೊಬೈಲ್ ಉಪಯೋಗದಿಂದ ಉತ್ತಮ ಸಾಹಿತ್ಯ ಕೃತಿಗಳನ್ನು ಓದುವುದಕ್ಕೂ ಬಿಡುವಿಲ್ಲದಂತಾಗಿದೆ. ಯುವ ಜನಾಂಗವು ಉತ್ತಮ ಸಾಹಿತ್ಯದ ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುವುದರೊಂದಿಗೆ ಅವರ ಬೌದ್ಧಿಕ ಮಟ್ಟವು ಹೆಚ್ಚುತ್ತಾ ಹೋಗುತ್ತದೆ. ಉತ್ತಮ ಸಾಹಿತಿಗಳ ಪುಸ್ತಕಗಳನ್ನು ಓದುವುದರಿಂದ ಜೀವನದಲ್ಲಿ ಪರಿವರ್ತನೆ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಯುವ ಜನಾಂಗವು ಹೆಚ್ಚು ಹೆಚ್ಚು ಪುಸ್ತಕ ಓದುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಉದ್ಯಾವರದ ಸಮಾಜ ಸೇವಕ ಪ್ರತಾಪ್    ಉದ್ಯಾವರ, ಪ್ರದರ್ಶನದ ವ್ಯವಸ್ಥಾಪಕ  ಭೂಪೇಶ್ ಪಾಲನ್, ಶ್ರೀಧರ್ ಭಟ್ ಸಾಗರ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.