ಶುಕ್ರವಾರ, ನವೆಂಬರ್ 15, 2019
23 °C

ಕಂಪ್ಲಿಯಲ್ಲಿ ಬಲಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

Published:
Updated:

ಕಂಪ್ಲಿ: ಸ್ಥಳೀಯ ಮಾರುತಿನಗರದಲ್ಲಿ ಯೋಗಿ ನಾರೇಯಣ ಯತೀಂದ್ರರ ಬಲಿಜ ಭವನ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.ಬಲಿಜ ಸಮಾಜ ಸಂಸ್ಥಾಪಕ ಅಧ್ಯಕ್ಷ ಕೆ. ಶ್ರೀನಿವಾಸಪ್ಪ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸಮಾಜದವರ ಅನುಕೂಲಕ್ಕಾಗಿ ನಾರೇಯಣ ಯತೀಂದ್ರರ ದೇವಸ್ಥಾನ, ಸಮುದಾಯ ಭವನ, ಕಲ್ಯಾಣ ಮಂಟಪ ಹಾಗೂ ಶಿಕ್ಷಣ ಕೇಂದ್ರ ಹೊಂದುವ ಉದ್ದೇಶವಿದೆ. ಇದಕ್ಕೆ ಎಲ್ಲಾ ಸಮುದಾಯದವರ ಸಹಾಯ ಸಹಕಾರ ಅಗತ್ಯವಿದೆ ಎಂದು ಹೇಳಿದರು.ಬಲಿಜ ಸಮಾಜದ ಮಾಜಿ ಅಧ್ಯಕ್ಷ ಡಿ. ಸೋಮನಾಥ ನಿವೇಶನ ದಾನವಾಗಿ ನೀಡಿದ್ದು, ಅವರ ಕುಟುಂಬದ ಸತೀಶ ಅವರನ್ನು ಸನ್ಮಾನಿಸಲಾಯಿತು.ರಾಮಸಾಗರ ಬಲಿಜ ಸಮಾಜದ ಅಧ್ಯಕ್ಷ ಪಲ್ಲೇದ ವೀರೇಶ್, ಚಿನ್ನಾಪುರ ಯರಿಯಪ್ಪ, ಮೆಟ್ರಿ ಭೀಮಣ್ಣ,    ಬಲಿಜ ಸಮಾಜದ ಕಾರ್ಯದರ್ಶಿ ಕವಿತಾಳ ಬಸವ ರಾಜ, ಖಜಾಂಚಿ ಡಿ. ಸತೀಶ್, ಕೆ. ವಾಣಿದಾಸ್, ವೈ . ದೇವೇಂದ್ರಪ್ಪ, ಕೆ. ಅನಿಲ್, ಪಿ. ಈರಣ್ಣ, ಪಿ. ಮಹಾಬಲಿ, ಎಂ. ಚಿದಾನಂದಪ್ಪ, ಎಂ. ಮಲ್ಲಿಕಾರ್ಜುನ, ಕೆ. ಆಂಜನೇಯಲು, ಎಂ. ರಾಘವೇಂದ್ರ, ಇಂಗಳಗಿ ನಾರಾಯಣಪ್ಪ ವಿವಿಧ ಗ್ರಾಮಗಳ ಬಲಿಜ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)