ಶನಿವಾರ, ಮೇ 8, 2021
26 °C

ಕಂಪ್ಲಿ: ಅಕ್ಕಮಹಾದೇವಿ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ಶಿವಶರಣೆ ಅಕ್ಕ ಮಹಾದೇವಿ ಜಯಂತಿ ಅಂಗವಾಗಿ ಅಕ್ಕಮಹಾದೇವಿ ಮಹಿಳಾ ಮಂಡಳಿಯವರು ಶುಕ್ರವಾರ ಪಟ್ಟಣದಲ್ಲಿ ಅಕ್ಕನ ಭಾವಚಿತ್ರ ಮೆರವಣಿಗೆ ನಡೆಸಿದರು.ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯಿಂದ ಆರಂಭಗೊಂಡ ಮೆರವಣಿಗೆ ಡಾ. ರಾಜ್‌ಕುಮಾರ್ ಮುಖ್ಯರಸ್ತೆ ಮೂಲಕ ಸಾಗಿ ಪುನಃ ಪಾಠ ಶಾಲೆ ತಲುಪಿತು. ಮೆರವಣಿಗೆಯಲ್ಲಿ ಕಳಸ ಕನ್ನಡಿ ಹಿಡಿದ ಸುಮಂಗಲಿಯರು, ಭಜನಾ ಮಂಡಲಿ, ಮಂಗಲವಾದ್ಯಗಳು ಪಾಲ್ಗೊಂಡಿದ್ದವು.ನಂತರ ಪಾಠ ಶಾಲೆಯಲ್ಲಿರುವ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಅಕ್ಕನ ನಾಮಕರಣ ಮತ್ತು ಗೊಗ್ಗ ವಿಶಾಲಾಕ್ಷಮ್ಮರವರ ಸ್ಮರಣಾರ್ಥ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಗೊಗ್ಗ ಸಹೋದರಿಯರಿಂದ ಜರುಗಿತು. ಜಯಂತಿ ಅಂಗವಾಗಿ ಅಕ್ಕ ಮಹಾದೇವಿ ದೇವಸ್ಥಾನದಲ್ಲಿ ಅಕ್ಕನ ಶಿಲಾಮೂರ್ತಿಗೆ ವಿಶೇಷ ರುದ್ರಾಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಮುಕ್ಕುಂದಿ ರುದ್ರಾಣಿ, ಮುಕ್ಕುಂದಿ ಮಮತ, ಅಕ್ಕ ಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಬೂದುಗುಂಪಿ ಪಾರ್ವತಮ್ಮ, ಉಪಾಧ್ಯಕ್ಷೆ ಕಲ್ಗುಡಿ ನಾಗರತ್ನ, ಕಾರ್ಯದರ್ಶಿ ಎನ್. ವಿಶಾಲಾಕ್ಷಿ, ಉಪ ಕಾರ್ಯದರ್ಶಿ ಪಿ. ಮಿನಾಕ್ಷಿ, ಖಜಾಂಚಿ ವಾಲಿ ಶಕುಂತಲ, ನಿರ್ದೇಶಕಿ ಶಶಿಕಲಾ ದೇವರು, ಕಲ್ಗುಡಿ ಬಸಂತೆಮ್ಮ , ಕಲ್ಗುಡಿ ಚನ್ನಮ್ಮ, ಗೊಂದಿ ಕಲಾವತಿ, ಕೋರಿ ಶರಣಮ್ಮ, ಎಸ್. ಮಲ್ಲಿಕಾರ್ಜುನಮ್ಮ, ಆರ್. ಮಲ್ಲಮ್ಮ, ಗಡಾದ ವಿಜಯ ಸಿದ್ದರಾಮಪ್ಪ, ಜಿ. ಚೈತ್ರ ಪ್ರಸಾದ್, ಪಾಠ ಶಾಲೆ, ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ, ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನ ಸಮಿತಿ, ವೀರಶೈವ ಸಂಘ ಸಮಿತಿ, ವೀರಶೈವ ತರುಣ ಸಂಘಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಾಮೂಹಿಕ ವಿವಾಹ ಕಾರ್ಯಕ್ರಮ

ಕಂಪ್ಲಿ: ಪಟ್ಟಣದಲ್ಲಿ ಮುಂದಿನ ಜೂನ್ ತಿಂಗಳಲ್ಲಿ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಗುಜ್ಜಲ ನಾಗರಾಜ ತಿಳಿಸಿದ್ದಾರೆ.ವಿವಾಹವಾಗುವವರು ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತಿ ವೇದಿಕೆ ತಾಲ್ಲೂಕು ಅಧ್ಯಕ್ಷ ಶಿವಪ್ಪನಾಯಕ ಅವರಲ್ಲಿ (ಮೊ.ಸಂ. 8105138831) ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.