ಕಂಬಾರರಿಗೆ ಅಭಿನಂದನೆ

7

ಕಂಬಾರರಿಗೆ ಅಭಿನಂದನೆ

Published:
Updated:
ಕಂಬಾರರಿಗೆ ಅಭಿನಂದನೆ

ಬೆಂಗಳೂರು: ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿರುವ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡರು ಅಭಿನಂದಿಸಿದರು.ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮೈ.ಚ. ಜಯದೇವ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರೊ.ಕೃ. ನರಹರಿ, ರಾಷ್ಟ್ರೋತ್ಥಾನ ಪರಿಷತ್ತಿನ ಡಾ.ಎಸ್.ಆರ್. ರಾಮಸ್ವಾಮಿ, ಸಾಮರಸ್ಯ ವೇದಿಕೆಯ ಸಂಚಾಲಕ ವಾದಿರಾಜ್ ಮತ್ತು ಸಂಘಪರಿವಾರದ ಇತರ ಮುಖಂಡರು ಕಂಬಾರರ ನಿವಾಸ `ಸಿರಿ ಸಂಪಿಗೆ~ಗೆ ಗುರುವಾರ ತೆರಳಿ ಅಭಿನಂದನೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry