ಕಂಬಾರರ ರಂಗಸಂಭ್ರಮ

7

ಕಂಬಾರರ ರಂಗಸಂಭ್ರಮ

Published:
Updated:
ಕಂಬಾರರ ರಂಗಸಂಭ್ರಮ

ಭಾಗವತರು ಸಾಂಸ್ಕೃತಿಕ ಸಂಘಟನೆಯು ಮಂಗಳವಾರದಿಂದ ಶುಕ್ರವಾರದವರೆಗೆ `ಸಿರಿ ಸಂಪಿಗೆ ಕಂಬಾರರ ರಂಗಸಂಭ್ರಮ~ ನಾಟಕೋತ್ಸವ ಹಮ್ಮಿಕೊಂಡಿದೆ. ಈ ನಾಲ್ಕು ದಿನ ಕಂಬಾರರ ನಾಟಕಗಳ ಪ್ರದರ್ಶನ, ಸಂವಾದ, ಜಾನಪದ ಗೀತೆಗಳ ಗಾಯನ ಕಾರ್ಯಕ್ರಮಗಳಿರುತ್ತವೆ.  ಕನ್ನಡ ರಂಗಭೂಮಿಗೆ ಹದಿನಾಲ್ಕು ನಾಟಕಗಳನ್ನು ಕೊಟ್ಟು ರಂಗ ಪರಂಪರೆಯನ್ನು ಗಟ್ಟಿಗೊಳಿಸಿದ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಸಂದಿರುವ ಸಡಗರದಲ್ಲಿ ಭಾಗವತರು ಸಾಂಸ್ಕೃತಿಕ ಸಂಘಟನೆಯು ಅವರ ನಾಟಕಗಳ `ಸಿರಿಸಂಪಿಗೆ~ ನಾಟಕಗಳ ಹಬ್ಬವನ್ನು ಆಯೋಜಿಸಿದೆ.ಮಂಗಳವಾರ (ಫೆ.21) ಸಂಜೆ 6.45ಕ್ಕೆ ರಂಗಕಲಾವಿದೆ, ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಅವರಿಂದ ಉದ್ಘಾಟನೆ. ನಂತರ ಸ್ಪಂದನ ತಂಡದಿಂದ ಕರಿಮಾಯಿ ನಾಟಕ ಪ್ರದರ್ಶನ (ನಿರ್ದೇಶನ: ಬಿ.ಜಯಶ್ರೀ).ಬುಧವಾರ (ಫೆ.22) ಸಂಜೆ 7ಕ್ಕೆ ಪ್ರಯೋಗರಂಗ ತಂಡದಿಂದ `ಶಿವರಾತ್ರಿ~ ನಾಟಕ ಪ್ರದರ್ಶನ (ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್).ಗುರುವಾರ (ಫೆ.23) ಸಂಜೆ 7ಕ್ಕೆ ರಂಗಾಯಣ ತಂಡದಿಂದ `ಶಿಖರ ಸೂರ್ಯ~ (ನಿರ್ದೇಶನ: ಬಿ.ವಿ.ರಾಜಾರಾಂ).ಶುಕ್ರವಾರ (ಫೆ.24)ಸಂಜೆ 5ಕ್ಕೆ ಚಂದ್ರಶೇಖರ ಕಂಬಾರರೊಂದಿಗೆ ಪತ್ರಕರ್ತ ರವಿಬೆಳೆಗೆರೆ ಸಂವಾದ. ಪ್ರಸ್ತಾವನೆ: ಪ್ರೊ.ಹಿ.ಚಿ. ಬೋರಲಿಂಗಯ್ಯ. ನಿವೃತ್ತ ಹಿರಿಯ ನ್ಯಾಯವಾದಿ ಎ.ಜೆ.ಸದಾಶಿವ, ರಂಗಚಿಂತಕಿ ಡಾ.ವಿಜಯಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ.ಮನು ಬಳಿಗಾರ್ ಅವರಿಗೆ ರಂಗ ಗೌರವ. ರಂಗಸಂಸ್ಥಾನ ತಂಡದಿಂದ ಜಾನಪದ ಗೀತೆಗಳ ಗಾಯನ. ನಂತರ ಬೆನಕ ತಂಡದಿಂದ `ಜೋಕುಮಾರ ಸ್ವಾಮಿ~ ನಾಟಕ ಪ್ರದರ್ಶನ (ನಿರ್ದೇಶನ: ಬಿ.ವಿ. ಕಾರಂತ). ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ನಾಟಕಕ್ಕೆ ರೂ. 50 ಪ್ರವೇಶ ದರ. ಮಾಹಿತಿಗೆ: 94480 77292.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry