ಕಂಬಾರರ ಶರಣಾಗತಿ ಸಮ್ಮತವೇ?

7

ಕಂಬಾರರ ಶರಣಾಗತಿ ಸಮ್ಮತವೇ?

Published:
Updated:

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರು ಉಡುಪಿ ಮಾಧ್ವಮಠದ ಪೇಜಾವರ ಶ್ರೀಗಳ ಪಾದಕ್ಕೆರಗಿರುವ ದೃಶ್ಯ (ಪ್ರವಾ ಅ. 9) ಕಂಡು ಅಘಾತವಾಯಿತು! ಈ ನಾಡಿನ ಶೂದ್ರರ, ದಲಿತರ, ಹಿಂದುಳಿದವರ `ಸಾಕ್ಷಿಪ್ರಜ್ಞೆ~ಯಾಗಬೇಕಿದ್ದ ಕಂಬಾರರು ಈ ರೀತಿ ಸಾರ್ವಜನಿಕವಾಗಿ ಮಠಾಧಿಪತಿಯೊಬ್ಬರ ಪಾದಕ್ಕೆ ಬಿದ್ದಿರುವುದು, ಜ್ಞಾನಪೀಠ ಪಡೆದ ಅಮಲಿನಲ್ಲಿದ್ದ ನಮ್ಮಂತವರಿಗೆ ವಾಸ್ತವತೆ ಅರಿವು ಮೂಡಿಸಿದೆ.

ಪೇಜಾವರರು `ಉತ್ತಮ~ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ತಮ್ಮ ಕಾಲಿಗೆ ಬೀಳಿಸಿಕೊಳ್ಳಬಲ್ಲ `ಸವಲತ್ತು~ ಹೊಂದಿದವರಷ್ಟೆ. ಕಂಬಾರರು ತಮ್ಮ ಅಪಾರ ಸಾಹಿತ್ಯಿಕ ಜ್ಞಾನದಿಂದಾಗಿ ಜ್ಞಾನಪೀಠ ಪಡೆದವರೆಂದು ನಮ್ಮಂಥವರು ನಂಬಿದ್ದೇವೆ.

ಹಿಂದೆ ರಾಷ್ಟ್ರಪತಿಯೊಬ್ಬರು ಸಾರ್ವಜನಿಕವಾಗಿ ನೂರೊಂದು ಜನ ಬ್ರಾಹ್ಮಣರ ಕಾಲು ತೊಳೆದದ್ದನ್ನು ತೀವ್ರವಾಗಿ ವಿರೋಧಿಸಿದ ಡಾ. ರಾಮಮನೋಹರ ಲೋಹಿಯಾ `ಬ್ರಾಹ್ಮಣರ ಕಾಲುಗಳನ್ನು ಸಾರ್ವಜನಿಕವಾಗಿ ತೊಳೆಯುವ ಕೈಗಳು ಶೂದ್ರರನ್ನು, ದಲಿತರನ್ನು ಒದೆಯಬಲ್ಲ ಕಾಲುಗಳ ಜೊತೆಗೇ ಇರುತ್ತವೆ~ ಎಂಬ ಮಾತುಗಳಿಗೆ ಇಲ್ಲಿ ಹೆಚ್ಚು ಅರ್ಥ ಬರುತ್ತಿದೆ.

ಇಲ್ಲಿ ಕಂಬಾರರಿಗೆ ಪೇಜಾವರರ ಕಾಲು ತೊಳೆಯುವ ಅವಕಾಶ ಸಿಕ್ಕಿಲ್ಲವಷ್ಟೆ! ಆತ್ಮಗೌರವಕ್ಕಿಂತಲೂ ಮಿಗಿಲಾದ ಯಾವುದಾದರೂ ಪ್ರಶಸ್ತಿ ಇದೆಯೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry