ಮಂಗಳವಾರ, ಮೇ 11, 2021
20 °C

ಕಕ್ಷಿದಾರರಿಗೆ ತೊಂದರೆಯಾಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಪ್ಟೆಂಬರ್ 7ರ ಬೆಳಿಗ್ಗೆ  ದೆಹಲಿಯ ಉಚ್ಚ ನ್ಯಾಯಾಲಯದ ಹೊರಗಡೆ  ಉಗ್ರಗಾಮಿಗಳಿಂದ ನಡೆದ ಭೀಕರ ಬಾಂಬ್ ಸ್ಫೋಟವನ್ನು ಎಲ್ಲರೂ ಖಂಡಿಸಲೇಬೇಕು,  ಇಂಥಾ ದುಷ್ಕೃತ್ಯಗಳು ಮರುಕಳಿಸದಂತೆ ಕೇಂದ್ರ  ಮತ್ತು  ಎಲ್ಲಾ ರಾಜ್ಯ ಸರ್ಕಾರಗಳೂ   ಸೂಕ್ತ ಮುಂಜಾಗರೂಕತಾ  ಕ್ರಮಗಳನ್ನು ಕೈಗೊಳ್ಳಲೇಬೇಕು, ಅಗತ್ಯ ಭದ್ರತಾ  ವ್ಯವಸ್ಥೆಗಳನ್ನು ಮಾಡಲೇಬೇಕು ಎಂದು  ಸರ್ಕಾರಗಳನ್ನು ಎಚ್ಚರಿಸುವುದಕ್ಕಾಗಿ ಧ್ವನಿಯೆತ್ತಿ ಹೇಳಲು ಪ್ರತಿಭಟನೆಗಳನ್ನು ಮಾಡುವುದು ಸರಿಯಾದ ಕ್ರಮವೇ ಆಗಿರುತ್ತದೆ. ಹಾಗಾಗಿ ದೇಶದ ಹಲವು ನಗರ-ಪಟ್ಟಣಗಳಲ್ಲಿ ವಕೀಲರು ಪ್ರತಿಭಟಿಸಿದ್ದು ಸರಿ.ಆದರೆ ಅವರು ಆಯ್ದುಕೊಂಡ ಕ್ರಮ ಅಂದರೆ ನ್ಯಾಯಾಲಯಗಳ ಕಲಾಪಗಳನ್ನು  ಬಹಿಷ್ಕರಿಸಿ ಪ್ರತಿಭಟಿಸಿದ್ದು ಖಂಡಿತವಾಗಿಯೂ ಸರಿಯಲ್ಲ. ತಾವು ಇಡೀ ದಿನ ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಿ ದೂರವುಳಿದರೆ ಅಂದು  ನಡೆಯಬೇಕಾದ ವಿಚಾರಣೆ ಇತ್ಯಾದಿ ಕಲಾಪಗಳಲ್ಲಿ ಭಾಗವಹಿಸಲೆಂದು ಬರುವ ಸ್ಥಳೀಯ ಹಾಗೂ ಪರವೂರುಗಳ ಸಾಕ್ಷಿಗಳಿಗೂ ಕಕ್ಷಿಗಾರರಿಗೂ ಆಗುವ ತೊಂದರೆ ಹಾಗೂ ನಷ್ಟಗಳ ಬಗ್ಗೆ  ಈ  ಪ್ರಜ್ಞಾವಂತ ವಕೀಲರು ಯೋಚಿಸಬೇಕೋ ಬೇಡವೋ...  ಆದ್ದರಿಂದ ಸಮಸ್ತ  ವಕೀಲ ಬಂಧುಗಳಲ್ಲಿ ಕೋರಿಕೆಯೇನೆಂದರೆ, ಇಂಥಾ ಸಂದರ್ಭದಲ್ಲಿ ಅವರು  ನ್ಯಾಯಾಲಯಗಳ ಕಲಾಪಗಳನ್ನೇ ಬಹಿಷ್ಕರಿಸಿ ಪ್ರತಿಭಟಿಸುವ ಬದಲು, ತಮ್ಮ   ಕಕ್ಷಿಗಾರರ ಮೇಲೆ, ಸಾಕ್ಷಿಗಳ ಮೇಲೆ ಕನಿಕರವಿಟ್ಟು, ಪ್ರತಿಭಟನಾ ಕಾರ್ಯಕ್ರಮಗಳನ್ನು ನ್ಯಾಯಾಲಯಗಳ ಕಲಾಪಗಳು ಆರಂಭಗೊಳ್ಳುವ ಮೊದಲು, ಅಥವಾ ಮಧ್ಯಾಹ್ನದ ಊಟದ ವಿರಾಮದ ವೇಳೆಯಲ್ಲಿ ಅಥವಾ ಸಂಜೆ ಕಲಾಪಗಳು ಮುಗಿದ ನಂತರ ಇಟ್ಟುಕೊಳ್ಳಲಿ. ಈ ಮೂಲಕ ಅನನುಕೂಲ ಮತ್ತು ನಷ್ಟಗಳನ್ನು ತಪ್ಪಿಸಲಿ.   

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.