ಶುಕ್ರವಾರ, ಜನವರಿ 24, 2020
28 °C

ಕಗ್ಗಲೀಪುರ ಗ್ರಾಮಕ್ಕೆ ಹದಗೆಟ್ಟ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲಘಟ್ಟಪುರ: ಕಗ್ಗಲೀಪುರ ಗ್ರಾಮ ಪಂಚಾಯ್ತಿ ಸೇರಿದ ಉದ್ದಿಪಾಳ್ಯ ಗ್ರಾಮ­­ದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ನಿಂತ ಚರಂಡಿ ನೀರಿನಿಂದ ನೊಣ, ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ದುರ್ನಾತ ಬೀರುತ್ತಿದೆ ಎಂದು ಸ್ಥಳೀ­ಯರು ಬೇಸರ ವ್ಯಕ್ತಪಡಿಸಿದ್ದಾರೆ.ಸಮರ್ಪಕ ರಸ್ತೆಗಳಿಲ್ಲ: ಅಲ್ಲದೇ ಕನಕ­ಪುರ ರಸ್ತೆಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಸಮರ್ಪಕವಾದ ರಸ್ತೆಗ­ಳಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ದಿ ಕಾಮಗಾರಿಗಳು ಕುಂಠಿತ­ಗೊಂಡಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಉದ್ದಿನ­ಪಾಳ್ಯದ ಪೈಪ್ ಲೈನ್ ರಸ್ತೆಯಿಂದ ಜನ­ಪ್ರತಿನಿಧಿಗಳು,   ಶ್ರೀಮಂತರ ತೋಟಗ­ಳಿಗೆ ಸಂಚಾರ ನಡೆಸಲು ಸುಸಜ್ಜಿತವಾದ ರಸ್ತೆಗಳಿವೆ. ಆದರೆ,  ಸಾಮಾನ್ಯ ಜನರು ಸಂಚಾರ ನಡೆಸುವ ರಸ್ತೆಗಳು ಹಾಳಾಗಿವೆ ಎಂದು ದೂರಿದ್ದಾರೆ.

ಪ್ರತಿಕ್ರಿಯಿಸಿ (+)