`ಕಚ್ಚಾಟ ಬಿಡಿ- ಬೆಂಬಲ ಬೆಲೆ ಕೊಡಿ'

7

`ಕಚ್ಚಾಟ ಬಿಡಿ- ಬೆಂಬಲ ಬೆಲೆ ಕೊಡಿ'

Published:
Updated:

ಗುಲ್ಬರ್ಗ: ಕೆಜೆಪಿ-ಬಿಜೆಪಿ ಕಚ್ಚಾಟವನ್ನು ಬಿಡಿ. ಮಾರುಕಟ್ಟೆ ಮಧ್ಯ ಪ್ರವೇಶಿಸಿ ತೊಗರಿ ಹಾಗೂ ಕಬ್ಬಿಗೆ ಬೆಂಬಲ ಬೆಲೆ ಕೊಡಿ ಎಂದು ಮಾಜಿ  ಪ್ರಧಾನಿ ಎಚ್.ಡಿ.ದೇವೇಗೌಡ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.ರೈತರಿಗೆ ಬೆಳೆಯುವ ವೆಚ್ಚ ಹೆಚ್ಚಿದೆ. ಹೀಗಾಗಿ ಬೆಂಬಲ ಬೆಲೆ ಕೂಡಲೇ ನಿಗದಿ ಪಡಿಸಬೇಕು ಎಂದ ಅವರು, ಈ ವಿಚಾರದಲ್ಲಾರೂ ಪಕ್ಷಭೇದ ಮರೆತು ಒಗ್ಗೂಡಿ ಎಂದು ಸಲಹೆ ನೀಡಿದರು.ಕೃಷ್ಣಾ ಯೋಜನೆಗಳಿಗೆ ನಾನು ಸಚಿವ ಮತ್ತು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಹಣ ಬಂದಿದೆ. ಅಲ್ಲದೇ ಅದೇ ವಿಚಾರಕ್ಕೆ ನಾನು ರಾಜೀನಾಮೆ ನೀಡಿದೆ. ಆದರೆ ಬಳಿಕ ಕಾಮಗಾರಿ ಸಮರ್ಪಕವಾಗಿ ನಡೆಯದ ಪರಿಣಾಮ ನೀರಿದ್ದರೂ ರೈತರಿಗೆ ಸಿಗದಾಗಿದೆ ಎಂದ ಅವರು, ಇಂದಿರಾ ಗಾಂಧಿಯನ್ನು ವಿಜಾಪುರಕ್ಕೆ ಕರೆಯಿಸಿ ಚಿನ್ನದಲ್ಲಿ ತೂಗಿಸಿದ ಮುಖಂಡರಿಗೆ ಕೇಂದ್ರದಿಂದ ಹಣ ತರಿಸಲು ಏನಾಗಿತ್ತು? ಎಂದು ಪ್ರಶ್ನಿಸಿದರು.`ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ'ಗೆ ಒತ್ತಾಯಿಸುವ ದೆಹಲಿ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಅತ್ಯಾಚಾರ ನಡೆಸಿರುವುದು ಹೇಯ ಕೃತ್ಯ. ಆದರೆ ಶಿಕ್ಷೆಯನ್ನು ಕಾನೂನು ಚೌಕಟ್ಟಿನಲ್ಲಿಯೇ ವಿಧಿಸಬೇಕು. ಈ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ.ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು. ಆದರೆ ದೇಶದ ಬಹುಕೋಟಿ ಅವಿದ್ಯಾವಂತರು ಹೋರಾಟದಲ್ಲಿ ಸೇರಿಕೊಂಡು ಪ್ರಜಾಪ್ರಭುತ್ವ ಮರುಸ್ಥಾಪಿಸಿದರು. ಜನತೆ ಪ್ರಜಾಪ್ರಭುತ್ವಕ್ಕೆ ಪುನರ್‌ಶಕ್ತಿ ನೀಡುತ್ತಾರೆ. ಅದೇ ಚೌಕಟ್ಟಿನಲ್ಲಿ ಎಲ್ಲವೂ ಇತ್ಯರ್ಥ ಆಗಬೇಕು ಎಂದು ಭವಿಷ್ಯ ನುಡಿದರು.ಪಕ್ಷದ ನಿಯಮಾವಳಿಯ ಅನ್ವಯ ರಾಜ್ಯ ಪದಾಧಿಕಾರಿಗಳು ಸೇರಿಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಬಳಿಕ ರಾಷ್ಟ್ರ ಘಟಕಕ್ಕೆ ಪಟ್ಟಿ ಬರುತ್ತದೆ. ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆಯನ್ನು ಆ ಸಂದರ್ಭ ದಲ್ಲಿ ಪರಿಶೀಲಿಸುತ್ತೇವೆ ಎಂದ ಅವರು, ನಾನು ಅಭ್ಯರ್ಥಿ ಆಯ್ಕೆಗೆ ಬಂದಿಲ್ಲ. ಕಾರ್ಯಕರ್ತರನ್ನು ಭೇಟಿ ಆಗಲು ಬಂದಿದ್ದೇನೆ ಎಂದರು.  ನಾಳೆ ಪೂರ್ವಭಾವಿ ಸಭೆ

ಗುಲ್ಬರ್ಗ: ರಾಜ್ಯ ಮಟ್ಟದ ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಮಹಾಸಭಾ ಮುಖಂಡ ಹಾಗೂ ರಾಜ್ಯ ಗೌರವ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕನಾಥ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎ.ಆರ್. ಗೋವಿಂದಸ್ವಾಮಿ, ರಾಜ್ಯ ಅಧ್ಯಕ್ಷ ಡಾ. ಬಾಲಗುರುಮೂರ್ತಿ ಡಿ. 30ರಂದು ಗುಲ್ಬರ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಡಿ. 27ರಂದು ಬೆಳಿಗ್ಗೆ 11ಕ್ಕೆ ತುಳಜಾಭವಾನಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತದೆ  ಎಂದು ಒಕ್ಕೂಟದ ಜಿಲ್ಲಾ ಘಟಕದ ರಾಜ್ಯ ಉಪಾಧ್ಯಾಕ್ಷ ನಾರಾಯಣರಾವ್ ಸುರವಸೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry