ಕಚ್ಚಾತೈಲ ಬೆಲೆ ಏರಿಕೆ ಭೀತಿ

7

ಕಚ್ಚಾತೈಲ ಬೆಲೆ ಏರಿಕೆ ಭೀತಿ

Published:
Updated:
ಕಚ್ಚಾತೈಲ ಬೆಲೆ ಏರಿಕೆ ಭೀತಿ

ನವದೆಹಲಿ (ಪಿಟಿಐ): ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಕುಸಿತ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆ ಈ ವಾರದ ಷೇರುಪೇಟೆ ಏರಿಳಿತ ನಿರ್ಧರಿಸಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಷೇರುಪೇಟೆಗೆ ರಜೆ. ಸೆ.9ರಂದು ವಹಿವಾಟು ನಡೆಯುವುದಿಲ್ಲ. ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ) ಮತ್ತು ಗ್ರಾಹಕ ಬೆಲೆ ಆಧರಿಸಿದ (ಸಿಪಿಐ)  ಹಣದುಬ್ಬರ ಅಂಕಿ ಅಂಶಗಳು ಗುರುವಾರ ಪ್ರಕಟಗೊಳ್ಳಲಿವೆ. ಈ ಅಂಕಿ ಅಂಶಗಳನ್ನು ಆಧರಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಸೆ.20ರಂದು ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದೆ.

ಹೀಗಾಗಿ `ಐಐಪಿ' ಮತ್ತು `ಸಿಪಿಐ' ಪೇಟೆಯ ಮೇಲೆ ಗರಿಷ್ಠ ಮಟ್ಟದ ಪ್ರಭಾವ ಬೀರಬಹುದು ಎಂದು ಬೊನಾಂಜಾ ಪೋರ್ಟ್‌ಪೊಲಿಯೊ ಸಂಸ್ಥೆಯ ಉಪಾಧ್ಯಕ್ಷ ರಾಕೇಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಸಿರಿಯಾ ಬಿಕ್ಕಟ್ಟಿನಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry