ಕಟ್ಜು ಸ್ಪಷ್ಟನೆ

7

ಕಟ್ಜು ಸ್ಪಷ್ಟನೆ

Published:
Updated:

ನವದೆಹಲಿ (ಪಿಟಿಐ): ದೇಶದ ಸಾಮಾಜಿಕ ಅನಿಷ್ಟಗಳಾದ ಜಾತಿ, ಕೋಮುವಾದದ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಶೇಕಡಾ 90ರಷ್ಟು ಜನರು ಮೂರ್ಖರು ಎಂದು ಹೇಳಿದ್ದೇನೆ ಎಂದು ಭಾರತೀಯ ಪತ್ರಿಕಾ ಮಂಡಲಿಯ ಅಧ್ಯಕ್ಷ ಮಾರ್ಕಂಡೇಯ ಕಟ್ಜು  ಸ್ಪಷ್ಟಪಡಿಸಿದ್ದಾರೆ.ಪತ್ರಿಕೆಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಿವೆ. ದೇಶದ ಶೇಕಡಾ 90ರಷ್ಟು ಜನರು ಮೂರ್ಖರು ಎಂದು ಹೇಳಿದ್ದು ನಿಜ. ಇದರ ಹಿಂದಿನ ಉದ್ದೇಶ ಯಾರನ್ನೂ ನೋಯಿಸುವುದಲ್ಲ ಎಂದು ಅವರು ವಿದ್ಯಾರ್ಥಿಗಳಾದ ತನಯಾ ಮತ್ತು ಆದಿತ್ಯ ಅವರಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.ಶೇ 90ರಷ್ಟು ಎಂದರೆ ನಿಖರವಾಗಿ ಅಷ್ಟೇ ಸಂಖ್ಯೆ ಎಂದಲ್ಲ, ದೊಡ್ಡ ಸಂಖ್ಯೆಯ ಜನರು ಎಂಬರ್ಥದಲ್ಲಿ ಹೇಳಿದ್ದೇನೆ ಎಂದು ಕಟ್ಜು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry