ಸೋಮವಾರ, ಮೇ 10, 2021
28 °C

ಕಟ್ಟಡಕ್ಕೆ ವಿಮಾನ ಡಿಕ್ಕಿ: 9 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಎಎಫ್‌ಪಿ): ಅಮೆರಿಕದ ಯುದ್ಧ ವಿಮಾನ ಡಿಕ್ಕಿ ಹೊಡೆದ ಪರಿಣಾಮ ವರ್ಜಿನಿಯಾ ಕಡಲತೀರದ ಅಪಾರ್ಟ್‌ಮೆಂಟ್ ಭಾಗಶ: ಹಾನಿಗೊಳಗಾಗಿದ್ದು, ಘಟನೆಯಲ್ಲಿ ಪೈಲಟ್ ಸೇರಿದಂತೆ ಒಂಬತ್ತು ಜನ ಗಾಯಗೊಂಡಿದ್ದಾರೆ.ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಶನಿವಾರ ಕಾರ್ಯಾಚರಣೆ ಕೈಗೊಂಡರು. ಘಟನಾ ಸ್ಥಳದಲ್ಲಿನ ಕೆಲವು ನಿವಾಸಿಗಳು ಕಣ್ಮರೆಯಾಗಿದ್ದರೂ ಅಧಿಕೃತ ಮಾಹಿತಿಯಲ್ಲಿ ಇದನ್ನು ದೃಢಪಡಿಸಿಲ್ಲ.ಅಪಘಾತಕ್ಕೆ ಒಳಗಾದ ವಿಮಾನದ ರೆಕ್ಕೆ ಮತ್ತಿತರ ಅವಶೇಷಗಳು ಸುತ್ತಲಿನ ಭಾಗದಲ್ಲಿ ಬಿದ್ದಿದ್ದು ಸುಮಾರು 40 ಅಪಾರ್ಟ್‌ವೆುಂಟ್‌ಗಳಿಗೆ ವ್ಯಾಪಕ ಪ್ರಮಾಣದಲ್ಲಿ ಬೆಂಕಿ ತಗುಲಿದೆ ಎಂದು ವರ್ಜಿನಿಯಾ ಕಡಲತೀರದ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.