ಮಂಗಳವಾರ, ಜೂನ್ 22, 2021
22 °C

ಕಟ್ಟಡ ಕಾಮಗಾರಿಗೆ ನಾಣಯ್ಯ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಇಲ್ಲಿನ ಪೆನ್ಷನ್‌ ಲೇನ್‌ನಲ್ಲಿರುವ ಪೊಲೀಸ್‌ ಇಲಾಖೆಯ ಜಾಗದಲ್ಲಿ ಸಂಚಾರ ಪೊಲೀಸ್‌ ಠಾಣೆ ನಿರ್ಮಿಸುತ್ತಿರುವುದಕ್ಕೆ ವಿಧಾನ ಪರಿಷತ್‌ ಸದಸ್ಯ ಎಂ.ಸಿ. ನಾಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಠಾಣೆ ನಿರ್ಮಾಣ ಮಾಡಲಾಗುತ್ತಿದ್ದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಎಂ.ಸಿ. ನಾಣಯ್ಯ ಅವರು, ಅನೇಕ ವರ್ಷಗಳಿಂದ ಈ ಜಾಗವನ್ನು ಆಟದ ಮೈದಾನವಾಗಿ ಸುತ್ತಮುತ್ತಲಿನ ಮಕ್ಕಳು ಬಳಸುತ್ತಿದ್ದಾರೆ. ಸ್ಥಳೀಯ ಮಕ್ಕಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ಕೋರಿದ್ದೇನೆ ಎಂದು ಹೇಳಿದರು.ಕೆಎಸ್‌ಆರ್‌ಟಿಸಿ ಡಿಪೊ ಎದುರಿಗೆ ಇರುವ ಎಪಿಎಂಸಿ ಆವರಣದಲ್ಲಿ ಸಂಚಾರ ಪೊಲೀಸ್‌ ಠಾಣೆ ನಿರ್ಮಿಸಬಹುದು ಎಂದು ಸಲಹೆ ನೀಡಿದ ಅವರು, ಈ ಜಾಗವನ್ನು ಪೊಲೀಸ್‌ ಇಲಾಖೆಗೆ ಮಂಜೂರು ಮಾಡಿಸಿಕೊಡಲು ಪ್ರಯತ್ನಿಸುವುದಾಗಿಯೂ ಭರವಸೆ ನೀಡಿದರು.

ಜೆಡಿಎಸ್‌ ಮುಖಂಡರಾದ ಬಿ.ವೈ. ರಾಜೇಶ್‌, ಕೆ.ಎಂ. ಉತ್ತಪ್ಪ, ಸುನೀಲ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.