ಭಾನುವಾರ, ಜೂನ್ 13, 2021
23 °C

ಕಟ್ಟಡ ಕಾರ್ಮಿಕರ ಹಿತ ರಕ್ಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಸರ್ಕಾರ ಅಸಂಘಟಿತ ಕಟ್ಟಡ ಕಾರ್ಮಿಕರ ಹಿತ ರಕ್ಷಿಸಲು ಕಲ್ಯಾಣ ಮಂಡಳಿಯೊಂದನ್ನು ಸ್ಥಾಪಿಸಿ ಆ ಮೂಲಕ ಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದೆ.ಅದಕ್ಕಾಗಿ ನಿಧಿಯೊಂದನ್ನು ಸ್ಥಾಪಿಸಿ ಕಟ್ಟಡ ನಿರ್ಮಾಣದಾರರಿಂದ ಸೆಸ್ ಸಂಗ್ರಹಿಸಿ  ದೊಡ್ಡ ಮೊತ್ತದ ನಿಧಿಯನ್ನು ಸ್ಥಾಪಿಸಿದೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವೃದ್ಧರಿಗೆ ಮಾಸಾಶನ, ಹೆರಿಗೆ ಭತ್ಯೆ, ಮದುವೆಗೆ ಸಹಾಯ ಧನ, ಆಕಸ್ಮಿಕ ಮರಣ ಹೊಂದಿದವರ ಕುಟುಂಬಗಳಿಗೆ ಸಹಾಯ, ಶವ ಸಂಸ್ಕಾರ ಭತ್ಯೆ, ಮನೆ ನಿರ್ಮಾಣಕ್ಕೆ 50,000 ರೂ. ಸಾಲ ನೀಡುವ ಸೌಲಭ್ಯಗಳು ಬಡ ಕಾರ್ಮಿಕರಿಗೆ ವರದಾನವಾಗಿವೆ. ಆದರೆ ವಸತಿ ನಿರ್ಮಾಣಕ್ಕೆ 50,000 ರೂ. ಸಾಲ ನಿಗದಿ ಮಾಡಲಾಗಿದೆ. ಅಷ್ಟು ಹಣದಿಂದ ಈ ಕಾಲದಲ್ಲಿ ಮನೆ ನಿರ್ಮಿಸಲು ಸಾಧ್ಯವಿಲ್ಲ. ಸ್ವಂತ ಜಾಗವೇ ಇಲ್ಲದ ಬಹುಪಾಲು ಬಡ ಕಾರ್ಮಿಕರು ಈ ಸಾಲಕ್ಕೆ ಅನರ್ಹರು. ಹೀಗಾಗಿ ಸರ್ಕಾರ ಅವರಿಗೆ ನಿವೇಶನ ಒದಗಿಸಬೇಕು ಅಥವಾ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ರೂಪಿಸಿರುವ ಸ್ವಂತ ಮನೆ ಯೋಜನೆಯ ಸೌಲಭ್ಯವನ್ನು ಕಟ್ಟಡ ಕಾರ್ಮಿಕರಿಗೂ ವಿಸ್ತರಣೆ ಮಾಡಿದರೆ ಅನುಕೂಲವಾದೀತು.ಕಟ್ಟಡ ಕಾರ್ಮಿಕರು ಅತ್ಯಂತ ದುಃಸ್ಥಿತಿಯಲ್ಲಿದ್ದಾರೆ ಎಂಬುದನ್ನು ಗಮನಿಸಬೇಕು. ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.