ಶುಕ್ರವಾರ, ನವೆಂಬರ್ 22, 2019
22 °C

ಕಟ್ಟಡ ಕುಸಿತ: 9 ಜನರ ಬಂಧನ

Published:
Updated:

ಮುಂಬೈ(ಐಎಎನ್‌ಎಸ್/ಪಿಟಿಐ): ಕಳೆದ ಗುರುವಾರ ಠಾಣೆಯ ಶಿಲಾಪಥ್ ಪ್ರದೇಶದಲ್ಲಿ ಏಳು ಅಂತಸ್ತಿತ ಬಹುಮಹಡಿ ಕಟ್ಟಡ ಕುಸಿದು 74 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮತ್ತೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರ ಸಂಖ್ಯೆ 9ಕ್ಕೇರಿದೆ.ವಿಚಾರಣೆಗಾಗಿ 14 ದಿನಗಳ ಕಾಲ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯವು ಆದೇಶ ಹೊರಡಿಸಿದೆ.ಬಂಧಿತರಲ್ಲಿ ಅಮಾನತುಗೊಂಡಿರುವ ಠಾಣೆ ನಗರಪಾಲಿಕೆ ಉಪ ಆಯುಕ್ತ ದೀಪಕ್ ಚವಾಣ್, ಸಹಾಯಕ ಆಯುಕ್ತ ಬಾಬಾ ಸಾಹೇಬ್ ಅಂದಾಲೆ, ಗುಮಾಸ್ತ ಕಿರಣ್ ಮಡಕೆ,   ಎನ್‌ಸಿಪಿ ನಗರ ಪಾಲಿಕೆ ಸದಸ್ಯ ಹೀರಾ ಪಾಟೀಲ್, ಪೊಲೀಸ್ ಅಧಿಕಾರಿ ಸೈಯದ್ ಮತ್ತು ಭೂ ವ್ಯವಹಾರದ ದಲ್ಲಾಳಿ ಜಬ್ಬಾರ್ ಪಟೇಲ್ ಸೇರಿದ್ದಾರೆ.

ಪ್ರತಿಕ್ರಿಯಿಸಿ (+)