ಕಟ್ಟಡ ನಿರ್ಮಾಣ: ಸ್ವಾಧೀನ ಪತ್ರ ಕಡ್ಡಾಯ

ಗುರುವಾರ , ಜೂಲೈ 18, 2019
22 °C

ಕಟ್ಟಡ ನಿರ್ಮಾಣ: ಸ್ವಾಧೀನ ಪತ್ರ ಕಡ್ಡಾಯ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ 50 ಹಾಗೂ 80 ಚದರ ಅಡಿ ವಿಸ್ತೀರ್ಣ ಹಾಗೂ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ವಾಧೀನ ಪತ್ರ ಪಡೆಯುವುದು ಕಡ್ಡಾಯಗೊಳಿಸುವ ಕುರಿತು ಪಾಲಿಕೆ ಆಡಳಿತ ಗಂಭೀರ ಚಿಂತನೆ ನಡೆಸಿದೆ.ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ರಾಮಮೂರ್ತಿ, ಆಯುಕ್ತ ಸಿದ್ದಯ್ಯ ಹಾಗೂ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.`ಪಾಲಿಕೆ ವ್ಯಾಪ್ತಿಯಲ್ಲಿ 50್ಡ80 ಚ.ಅಡಿ ಹಾಗೂ ಅದಕ್ಕಿಂತ ಹೆಚ್ಚು ವಿಸ್ತೀರ್ಣದ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ವಾಧೀನ ಪತ್ರ ಪಡೆಯುವುದು ಕಡ್ಡಾಯ. ಹಾಗೆಯೇ 30್ಡ40 ಹಾಗೂ 60್ಡ40 ಚ.ಅಡಿ ವಿಸ್ತೀರ್ಣದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯುವ ಸಂದರ್ಭದಲ್ಲಿ ರಸ್ತೆ ಅಗೆತ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿದೆ~ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.583 ಕಡತ ವಾಪಸ್: `ಬಿಬಿಎಂಪಿ ಅಸ್ತಿತ್ವಕ್ಕೆ ಬಂದ ನಂತರವೂ ಬಿಡಿಎ 583 ಬಹುಮಹಡಿ ಕಟ್ಟಡಗಳಿಗೆ ಸ್ವಾಧೀನ ಪತ್ರ ವಿತರಿಸಿದೆ. ಹಾಗಾಗಿ ಈ ಎಲ್ಲ ಕಟ್ಟಡಗಳಿಗೆ ಸಂಬಂಧಪಟ್ಟ ಕಡತಗಳನ್ನು ಪಾಲಿಕೆಗೆ ವಾಪಸ್ ಪಡೆಯಲಾಗುವುದು. ಬಳಿಕ ಈ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು~ ಎಂದು ಹೇಳಿದರು.`ಕೆಎಂಸಿ ಕಾಯ್ದೆಯ ಪ್ರಕಾರ ಪಾಲಿಕೆ ವತಿಯಿಂದಲೇ ಸ್ವಾಧೀನ ಪತ್ರ ಪಡೆಯಬೇಕು. ಆದರೆ ಕಾನೂನು ಬಾಹಿರವಾಗಿ ಬಿಡಿಎ ವತಿಯಿಂದ ಸ್ವಾಧೀನ ಪತ್ರ ಪಡೆದ ಈ ಕಟ್ಟಡಗಳ ಮಾಲೀಕರಿಂದ ಶುಲ್ಕ ಸಂಗ್ರಹಿಸಲು ಚಿಂತಿಸಲಾಗಿದೆ. ಅಲ್ಲದೇ ನಗರ ಯೋಜನೆ ವಿಭಾಗದ ವತಿಯಿಂದ ಈ ಎಲ್ಲ ಕಟ್ಟಡಗಳು ನಕ್ಷೆ ಪ್ರಕಾರ ನಿರ್ಮಾಣಗೊಂಡಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ~ ಎಂದು ವಿವರಿಸಿದರು.`ಬಿಬಿಎಂಪಿ ರಚನೆಯಾಗುವ ಸಂದರ್ಭದಲ್ಲಿ ನಗರಸಭೆ, ಪುರಸಭೆಗಳಿಂದ ಅನಧಿಕೃತವಾಗಿ ನಕ್ಷೆ ಮಂಜೂರಾತಿ ಪಡೆದು ನಿರ್ಮಾಣಗೊಂಡ ಕಟ್ಟಡಗಳ ನಕ್ಷೆಯನ್ನು ಮರು ಪರಿಶೀಲನೆ ಮಾಡಲು ಸಮಿತಿ ನಿರ್ಧರಿಸಿದೆ. ಜೂನ್ ಮಾಸಿಕ ಸಭೆಯಲ್ಲಿ ಈ ಎಲ್ಲ ವಿಷಯಗಳನ್ನು ಮಂಡಿಸಲಿದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry