ಬುಧವಾರ, ಮೇ 12, 2021
22 °C

ಕಟ್ಟಡ ಹಣ ಸಂಗ್ರಹ: ಸರ್ಕಾರದ ಅರ್ಜಿ ತಿರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್ ನಟ ಧರ್ಮೇಂದ್ರ ಅವರ ಒಡೆತನದ ಕಟ್ಟಡವೊಂದರಿಂದ ಸಂಗ್ರಹವಾಗುತ್ತಿರುವ `ಅಭಿವೃದ್ಧಿ ಶುಲ್ಕ~ದಲ್ಲಿ ಶೇ 2ರಷ್ಟು ಹಣವನ್ನು ಕೆರೆ ಒತ್ತುವರಿದಾರರ ಪುನರ್ವಸತಿಗಾಗಿ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.ಬನ್ನೇರುಘಟ್ಟ ರಸ್ತೆಯ ಕೊತ್ತನೂರು ಬಳಿ ಇರುವ 34 ಎಕರೆಗಳಷ್ಟು ವಿಶಾಲವಾಗಿರುವ ಜಮೀನಿನಲ್ಲಿ `ಸೌತ್ ಸಿಟಿ ಪ್ರಾಜೆಕ್ಟ್~ ಹೆಸರಿನಲ್ಲಿ ಧಮೇಂದ್ರ ಹಾಗೂ ಅವರ ಕುಟುಂಬದ ಒಡೆತನದಲ್ಲಿ ಇರುವ 3,000 ಫ್ಲ್ಯಾಟ್‌ಗಳ ಪ್ರಕರಣ ಇದು.ಈ ಯೋಜನೆಯನ್ನು ಪ್ರಶ್ನಿಸಿ 1996ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆಗಲೇ ಕಟ್ಟಡ ನಿರ್ಮಾಣ ಕಾರ್ಯ ಮುಗಿದಿದ್ದ ಹಿನ್ನೆಲೆಯಲ್ಲಿ, ಜನರ ಒಳಿತಿಗೋಸ್ಕರ ಶೇ 2ರಷ್ಟು ಅಭಿವೃದ್ಧಿ ಶುಲ್ಕ ವಸೂಲಿ ಮಾಡುವಂತೆ ಆಗ ಹೈಕೋರ್ಟ್ ನಿರ್ದೇಶಿಸಿತ್ತು.ಈ ಆದೇಶದ ಮೇರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈವರೆಗೆ ಒಟ್ಟು 13.22 ಕೋಟಿ ರೂಸಂಗ್ರಹವಾಗಿದೆ. ಪುಟ್ಟೇನಹಳ್ಳಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವವರ ಪುನರ್ವಸತಿಗಾಗಿ 99 ಲಕ್ಷ ರೂಪಾಯಿಗಳ ಅಗತ್ಯ ಇದೆ ಎಂದು ಸರ್ಕಾರ ತಿಳಿಸಿತ್ತು.ಅದಕ್ಕೆ ಹೈಕೋರ್ಟ್, `ನಾವು ಸರ್ಕಾರಕ್ಕೆ ತೆರಿಗೆ ಹಣ ನೀಡುವುದು ಏತಕ್ಕೆ, ಒತ್ತುವರಿದಾರರನ್ನು ತೆರವುಗೊಳಿಸುವುದು ಸರ್ಕಾರದ ಕರ್ತವ್ಯ. ಅವರಿಗೆ ನೆರವು ನೀಡಬೇಕಿರುವುದು ಸರ್ಕಾರ, ಯಾರ‌್ಯಾರು ಒತ್ತುವರಿದಾರರು ಇದ್ದಾರೆ ಅವರ ಬಗ್ಗೆ ನಮಗೆ ಮಾಹಿತಿ ನೀಡಿ, ಆ ಬಗ್ಗೆ ಬೇಕಿದ್ದರೆ ಆದೇಶ ಹೊರಡಿಸಬಹುದು. ಅದನ್ನು  ಬಿಟ್ಟು ಬೇರೆಯವರ ಜೇಬಿನಿಂದ ಅವರಿಗೆ ಹಣ ನೀಡುವುದು ಏತಕ್ಕೆ~ ಎಂದು ಪ್ರಶ್ನಿಸಿದ ಪೀಠ, ಮನವಿ ತಿರಸ್ಕರಿಸಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.