ಕಟ್ಟಿದ ಚರಂಡಿ: ಹೆಚ್ಚಿದ ದುರ್ವಾಸನೆ

7

ಕಟ್ಟಿದ ಚರಂಡಿ: ಹೆಚ್ಚಿದ ದುರ್ವಾಸನೆ

Published:
Updated:

ಎಚ್.ಡಿ. ಕೋಟೆ: ಪಟ್ಟಣದ ಬಸ್ ನಿಲ್ದಾಣ ಸಮೀಪ ಹೊಸದಾಗಿ ಚರಂಡಿ ನಿರ್ಮಿಸಿ ಹಲವು ತಿಂಗಳು ಕಳೆದರೂ, ಚರಂಡಿ ನೀರು ಸರಾಗವಾಗಿ ಹರಿಯದೇ ದುರ್ವಾಸನೆ ಬರುತ್ತಿದೆ ಎಂದು ಪಟ್ಟಣದ ನಾಗರಿಕರು ದೂರಿದ್ದಾರೆ.

ಬಸ್ ನಿಲ್ದಾಣ ಮುಂಭಾಗದಲ್ಲಿ ಸಂಗ್ರಹವಾಗುವ ಮಳೆ ನೀರು ಮುಂದೆ ಸಾಗಲು ಈ ಚರಂಡಿ ನಿರ್ಮಿಸಲಾಗಿದೆ.ಆದರೆ ಆ ಚರಂಡಿ ನೀರು ಹೊರ ಹೋಗಲು ಯಾವುದೇ ಮಾರ್ಗ ನಿರ್ಮಾಣ ಮಾಡಿಲ್ಲ. ಇದರಿಂದ ನೀರು ಒಂದೇ ಕಡೆ ಸಂಗ್ರವಾಗಿ ಕೊಳೆತು ನಾರುತ್ತಿದೆ. ಸುತ್ತಲಿನ ತಾಣ ಸೊಳ್ಳೆಗಳಿಗೆ ಆಶ್ರಯ ನೀಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದೆ.ಕೆಎಸ್‌ಆರ್‌ಟಿಸಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಟೆಲ್‌ಗಳಿಂದ ಬಾಡಿಗೆ ಪಡೆಯುತ್ತಿದೆ. ಆದರೆ ಆ ಹೊಟೆಲ್‌ನಿಂದ ಉತ್ಪತ್ತಿಯಾಗುವ ತ್ಯಾಜ್ಯ ಹೊರಹೋಗಲು ಸೂಕ್ತ ಸೌಲಭ್ಯ ಕಲ್ಪಿಸುತ್ತಿಲ್ಲ. ನಿಲ್ದಾಣದ ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ಆದಾಯ ಬರುತ್ತಿದ್ದು, ಆ ಹಣ ಬಳಸಿ ಚರಂಡಿ ಮತ್ತಷ್ಟು ವಿಸ್ತರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.ಶನಿವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಸಿ. ಜಗದೀಶ್, ಅಧ್ಯಕ್ಷ ರಫೀಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸೂಕ್ತ ಕ್ರಮದ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry