ಕಟ್ಟೆಯೊಡೆದ ಭಾವಾವೇಶ

7

ಕಟ್ಟೆಯೊಡೆದ ಭಾವಾವೇಶ

Published:
Updated:

ಕೈರೊ (ಐಎಎನ್‌ಎಸ್): ಹೋಸ್ನಿ ಮುಬಾರಕ್ ಅವರ ಪದತ್ಯಾಗದ ಸುದ್ದಿ ಖಚಿತವಾಗುತ್ತಿದ್ದಂತೆಯೇ ಮೆಡಿಟರೇನಿಯನ್ ಬಂದರು ನಗರವಾದ ಅಲೆಕ್ಸಾಂಡ್ರಿಯಾದಲ್ಲಿ ಜನರ ಭಾವಾವೇಶದ ಕಟ್ಟೆಯೊಡೆಯಿತು.ಶುಕ್ರವಾರ ರಾತ್ರಿ ಬೀದಿಗಿಳಿದು ಈ ಸಂಭ್ರಮವನ್ನು ಆಚರಿಸಿದ ಸಾವಿರಾರು ಜನರು ಆನಂದಾತಿರೇಕದಿಂದ ಕುಣಿದು ಕುಪ್ಪಳಿಸಿದರು.ಮುಬಾರಕ್ ಅವರ ನಿರಂಕುಶ ಆಡಳಿತದ ವಿರುದ್ಧ ಪ್ರಬಲವಾಗಿ ತಿರುಗಿಬಿದ್ದಿದ್ದ ಪ್ರಮುಖ ನಗರಗಳಲ್ಲಿ ಅಲೆಕ್ಸಾಂಡ್ರಿಯಾವೂ ಒಂದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry