ಮಂಗಳವಾರ, ಮೇ 18, 2021
23 °C

ಕಠಾರಿಪಾಳ್ಯದಲ್ಲಿ ಕರಗ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಕಠಾರಿಪಾಳ್ಯದಲ್ಲಿ ಶುಕ್ರವಾರ ರಾತ್ರಿ ಸಂಭ್ರಮದ ದ್ರೌಪದಾಂಬ ಕರಗ ಉತ್ಸವಕ್ಕೆ ಚಾಲನೆ ನೀಡಲಾಯಿತು.ಹೂವಿನ ಕರಗವನ್ನು ಹೊತ್ತ ಬೇತಮಂಗಲದ ನಾಗರಾಜ್ ಅವರ ಮಗ ಕೃಷ್ಣಮೂರ್ತಿ ಮೊದಲಿಗೆ ದೇವಾಲಯದ ಮುಂಭಾಗದಲ್ಲಿ ಸಿದ್ಧಪಡಿಸಿದ್ದ ವೇದಿಕೆಯೇರಿ ಸುದೀರ್ಘ ನರ್ತನ ಪ್ರಸ್ತುತಪಡಿಸಿದರು. ಸುತ್ತಮುತ್ತಲಿನ ಮನೆಗಳ ನಿವಾಸಿಗಳು ಕರಗದ ಮೊದಲ ನೃತ್ಯವನ್ನು ಭಕ್ತಿ-ಸಂಭ್ರಮದಿಂದ ವೀಕ್ಷಿಸಿದರು.ನಂತರ ಮೆರವಣಿಗೆ ಆರಂಭಿಸಿದ ಕರಗದ ನೃತ್ಯ ವೀಕ್ಷಿಸಲು ಸಾವಿರಾರು ಮಂದಿ ಸಮೀಪದ ಕಠಾರಿಗಂಗಮ್ಮ ದೇವಾಲಯದ ಮುಂಭಾಗ ಸಿದ್ಧಪಡಿಸಿದ್ದ ವೇದಿಕೆ ಸುತ್ತಮುತ್ತ ನೆರೆದಿದ್ದರು. ಮೊದಲು ದೇವಾಲಯ ಪ್ರವೇಶಿಸಿದ ಕರಗ ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ವೇದಿಕೆ ಏರಿ ನರ್ತಿಸ ತೊಡಗಿದಾಗ ಜನರ ಚಪ್ಪಾಳೆ ಮೇರೆ ಮೀರಿತ್ತು.ಈ ಸಂದರ್ಭದಲ್ಲಿ ಏರ್ಪಟ್ಟ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಹೆಚ್ಚು ಶ್ರಮಪಟ್ಟರು. ನಂತರ ಕರಗವು ಡೂಂಲೈಟ್ ವೃತ್ತ, ಬಂಗಾರಪೇಟೆ ವೃತ್ತ, ಅಂಬೇಡ್ಕರ್ ನಗರದ ಕಡೆಗೆ ಸಂಚರಿಸಿತು.ರಾತ್ರಿಯಿಡಿ ಸಂಚರಿಸುವ ಕರಗ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯ, ಸರ್ಕಾರಿ ಪದವಿ ಪೂರ್ವಕಾಲೇಜು ಮೈದಾನ, ಗಲ್‌ಪೇಟೆ, ಕುರುಬರ ಪೇಟೆ, ಹಾರೋಹಳ್ಳಿ, ಟೇಕಲ್ ರಸ್ತೆ ಮತ್ತಿತರೆ ಕಡೆ ಸಂಚರಿಸಿ ಶನಿವಾರ ಮಧ್ಯಾಹ್ನದ ಹೊತ್ತಿಗೆ ಸ್ವಸ್ಥಾನ ಕಠಾರಿಪಾಳ್ಯ ದೇವಾಲಯಕ್ಕೆ ಹಿಂತಿರುಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.