ಬುಧವಾರ, ಮೇ 12, 2021
26 °C

ಕಠಾರಿವೀರ ಸುರಸುಂದರಾಂಗಿ, ಗಾಡ್‌ಫಾದರ್: ಮುಂದೂಡಿದ ಸಭೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಕಠಾರಿವೀರ ಸುರಸುಂದರಾಂಗಿ~ ಮತ್ತು `ಗಾಡ್‌ಫಾದರ್~ ಚಿತ್ರಗಳ ಬಿಡುಗಡೆ ಕುರಿತು ಉದ್ಭವಿಸಿರುವ ವಿವಾದದ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲಿ ಗುರುವಾರ ನಡೆಯಬೇಕಿದ್ದ ಸಭೆ ಶುಕ್ರವಾರಕ್ಕೆ ಮುಂದೂಡಲಾಗಿದೆ.ಬಿಬಿಎಂಪಿ ಸದಸ್ಯರೂ ಆಗಿರುವ `ಕಠಾರಿವೀರ...~ ಚಿತ್ರದ ನಿರ್ಮಾಪಕ ಮುನಿರತ್ನ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಭಾಗವಹಿಸಬೇಕಿದ್ದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ.ಹೀಗಾಗಿ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಯಿತು ಎಂದು ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌`ಪ್ರಜಾವಾಣಿ~ಗೆ ತಿಳಿಸಿದರು.ಶುಕ್ರವಾರದ ಸಭೆಯಲ್ಲಿ ನಟರಾದ ಅಂಬರೀಷ್, ಉಪೇಂದ್ರ, ನಿರ್ಮಾಪಕರಾದ ಮುನಿರತ್ನ ಮತ್ತು ಕೆ.ಮಂಜು ಭಾಗವಹಿಸಲಿದ್ದು, ಮಧ್ಯಾಹ್ನ ಮಂಡಲಿ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.ಯು/ಎ ಪ್ರಮಾಣಪತ್ರ: ಒಂದೇ ದಿನ ಚಿತ್ರ ಬಿಡುಗಡೆ ಮಾಡುವ ಪೈಪೋಟಿಯಲ್ಲಿದ್ದ `ಅಣ್ಣಾ ಬಾಂಡ್~ ಮತ್ತು `ಕಠಾರಿವೀರ~ ಚಿತ್ರಗಳಿಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ದೊರಕಿದೆ. `ಅಣ್ಣಾ ಬಾಂಡ್~ ಮೇ ಒಂದರಂದು ತೆರೆಕಾಣುವುದು ಖಚಿತವಾಗಿದೆ. `ಕಠಾರಿವೀರ~ ಚಿತ್ರದ `3ಡಿ~ ಸೆನ್ಸಾರ್ ಆಗಬೇಕಿದ್ದು, 3ಡಿ ಪ್ರಮಾಣ ಪತ್ರ ದೊರಕಿದ ಬಳಿಕ ಬಿಡುಗಡೆ ದಿನಾಂಕ ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.