ಕಠ್ಮಂಡುವಿಗೆ ಶನಿವಾರ ಪ್ರಣವ್

ಬುಧವಾರ, ಜೂಲೈ 24, 2019
27 °C

ಕಠ್ಮಂಡುವಿಗೆ ಶನಿವಾರ ಪ್ರಣವ್

Published:
Updated:

ಕಠ್ಮಂಡು (ಪಿಟಿಐ): ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಎರಡು ದಿನಗಳ ಭೇಟಿಗಾಗಿ ಶನಿವಾರ ಕಠ್ಮಂಡುವಿಗೆ ತೆರಳಲಿದ್ದಾರೆ. ನೇಪಾಳದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಭರತ್ ಮೋಹನ್ ಅಧಿಕಾರಿ ಅವರ ಆಹ್ವಾನದ ಮೇರೆಗೆ ಪ್ರಣವ್ ಈ ಭೇಟಿ ನೀಡಲಿದ್ದಾರೆ.ನೇಪಾಳ ಪ್ರಧಾನಿ ಜಲನಾಥ್ ಖನಾಲ್ ಮತ್ತು ಅಧಿಕಾರಿ ಹಾಗೂ ಇತರ ರಾಜಕೀಯ ಪಕ್ಷಗಳ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಲಿರುವ ಮುಖರ್ಜಿ, ಉಭಯರಾಷ್ಟ್ರಗಳ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಸಹಕಾರಗಳ ನಡುವೆ ಚರ್ಚೆ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry