ಶನಿವಾರ, ಮೇ 8, 2021
26 °C

ಕಡಣಿಯಲ್ಲಿ ಸಡಗರದ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮೇಲ: ಇಲ್ಲಿಗೆ ಸಮೀಪದ ಕಡಣಿ ಗ್ರಾಮದ ಶ್ರೀ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ರವಿವಾರ ಸಂಜೆ ಕುಸ್ತಿ ಮತ್ತು ಶ್ರೀ ಭೋಗೇಶ್ವರ ರಥೋತ್ಸವ ಜರುಗುವ ಮೂಲಕ ಜಾತ್ರೆ ತೆರೆ ಬಿದ್ದಿತು.ಅಲಂಕರಿಸಿದ ಬೃಹತ್ತಾದ ರಥವನ್ನು ಭಕ್ತರು ಎಳೆಯುವ ಮೂಲಕ ಸಂಭ್ರಮಿಸಿದರು.ಗ್ರಾಮದ ಮತ್ತು ಸುತ್ತಮುತ್ತ ಹಳ್ಳಿಗಳ ಸಾವಿರಾರು ಜನರು ಈ ತೇರು ಎಳೆಯುವದನ್ನು ವೀಕ್ಷಿಸಿದರು.ವಿಶೇಷವಾಗಿ ಮಹಿಳೆಯರು ಹಣ್ಣು ಕಾಯಿ,ಉತ್ತತ್ತಿಯನ್ನು ರಥದ ಮೇಲೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು. ಇದಕ್ಕೂ ಮೊದಲು ಜಂಗಿ ಪೈಲ್ವಾನರಿಂದ ಕುಸ್ತಿಗಳು ನಡೆದವು.ಜಾತ್ರಾ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಮನರಂಜನೆ ಕಾರ್ಯಕ್ರಮಗಳು ಜರುಗಿದವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.