ಶುಕ್ರವಾರ, ಜೂನ್ 18, 2021
23 °C

ಕಡಬ: ಕಾಡಾನೆ ದಾಂಧಲೆ- ಕೃಷಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಬ (ಉಪ್ಪಿನಂಗಡಿ): ಎರಡು ತಿಂಗಳ ಹಿಂದೆ ಕಡಬದ ನೂಜಿಬಾಳ್ತಿಲ ಪರಿಸರದಲ್ಲಿ ಹಲವರ ತೋಟದೊಳಗೆ ನುಗ್ಗಿ ದಾಂಧಲೆ ಎಬ್ಬಿಸಿ ಗ್ರಾಮಸ್ಥರಲ್ಲಿ ಭೀತಿ ಉಂಟುಮಾಡಿದ್ದ ಕಾಡಾನೆ ಶುಕ್ರವಾರ ಮತ್ತು ಶನಿವಾರ ಮತ್ತೆ ಕಡಬ ಪರಿಸರದಲ್ಲಿ ದಾಂಧಲೆ ನಡೆಸಿದೆ. ಹಲವರ ಕೃಷಿ ಹಾನಿಗೆಡವಿದೆ.ಶನಿವಾರ ನಸುಕಿನಲ್ಲಿ ಕಡಬ ಸಮೀಪದ ಪಿಜಕ್ಕಳ ನಿವಾಸಿ ಶಬೀನಾ ಬಾನು ಅವರ ರಬ್ಬರ್ ಮತ್ತು ಅಡಿಕೆ ತೋಟದಲ್ಲಿ ಕಂಡು ಬಂದ ಆನೆ ಪುಂಡಾಟಿಕೆ ನಡೆಸಿ ಬೆಳೆ ನಾಶ ಮಾಡಿದೆ.ಶುಕ್ರವಾರ ನಸುಕಿನಲ್ಲಿ ನೂಜಿಬಾಳ್ತಿಲ ಗ್ರಾಮದ ಡೆಪ್ಪಾಜೆ ಆನಂದ ಶೆಟ್ಟಿ ಅವರ ಗದ್ದೆಗೆ ನುಗ್ಗಿ ಭತ್ತದ ನಾಟಿ ನಾಶಪಡಿಸಿದೆ. ಇದೇ ಪರಿಸರದ ಕೇಶವ ಎಂಬವರ ಅಡಿಕೆ ತೋಟದ ಸ್ಪಿಂಕ್ಲರ್, ಪೈಪ್‌ಗಳನ್ನು ಧ್ವಂಸ ಮಾಡಿದೆ.ಆನೆ ದಾಳಿ ಬಗ್ಗೆ `ಪ್ರಜಾವಾಣಿ~ ಜತೆ ಮಾತನಾಡಿದ ಕೇಶವ, ಬೆಳಿಗ್ಗೆ 5 ಗಂಟೆಗೆ ತೋಟಕ್ಕೆ ನೀರು ಬಿಡುತ್ತಿದ್ದೆ. ಕತ್ತಲಲ್ಲಿ ಆನೆ ವೇಗವಾಗಿ ತೋಟದೊಳಕ್ಕೆ ನುಗ್ಗಿದೆ. ಅದನ್ನು ನೋಡುತ್ತಲೇ ಮರದ ಮರೆಯಲ್ಲಿ ಓಡಿ ಮನೆ ಸೇರಿದೆ. ತುಸು ಹೊತ್ತು ತೋಟದಲ್ಲಿದ್ದು, ಬೆಳಕು ಹರಿಯುತ್ತಿದ್ದಂತೆ ಕಾಡಿನೊಳಗೆ ಸೇರಿಕೊಂಡಿತು ಎಂದು ವಿವರಿಸಿದರು.ಇಲಾಖೆ ನಿರ್ಲಕ್ಷ ದೂರು: ಕಾಡಾನೆ ಹಾವಳಿಯಿಂದಾಗಿ ಗ್ರಾಮದಲ್ಲಿ ಭೀತಿ ಉಂಟಾ ಗಿದೆ. ರಾತ್ರಿ ಬೆಳಗಾಗುವುದರೊಳಗೆ ಕಾಡಾನೆ ಗಳು ತೋಟಕ್ಕೆ ನುಗ್ಗಿ ಕಿರುಚಾಡುತ್ತವೆ.ಅರಣ್ಯ ಇಲಾಖೆಗೆ ದೂರು ನೀಡಿದರೂ ಅಧಿಕಾರಿಗಳೂ ತಿರುಗಿ ನೋಡುತ್ತಿಲ್ಲ. ಮನೆ ಮಂದಿ ಹೊರ ಬಾರದಂತಹ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.