ಕಡಲತೀರದಲ್ಲಿ ರಷ್ಯನ್ನರ ಮೋಜು ಮಸ್ತಿ!

7

ಕಡಲತೀರದಲ್ಲಿ ರಷ್ಯನ್ನರ ಮೋಜು ಮಸ್ತಿ!

Published:
Updated:
ಕಡಲತೀರದಲ್ಲಿ ರಷ್ಯನ್ನರ ಮೋಜು ಮಸ್ತಿ!

ಕಾರವಾರ:  ‘ಐಎನ್‌ಎಸ್‌ ವಿಕ್ರಮಾದಿತ್ಯ’ ವಿಮಾನ ವಾಹಕ ಯುದ್ಧ ನೌಕೆಯೊಂದಿಗೆ ಇಲ್ಲಿಗೆ ಬಂದಿರುವ ರಷ್ಯಾದ ತರಬೇತಿ ಸಿಬ್ಬಂದಿ ಶನಿವಾರ ನಗರದ ಕಡಲತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದುದು ಕಂಡುಬಂತು.ಎರಡು ತಿಂಗಳ ಕಾಲ ನೌಕಾಯಾನ ಮಾಡಿದ್ದ ಅವರೆಲ್ಲರೂ ಶನಿವಾರ ವಿಲಾಸಿ ಮೂಡ್‌­ನಲ್ಲಿದ್ದರು. ತಾವು ವಾಸ್ತವ್ಯ ಹೂಡಿರುವ ಹೋಟೆ­ಲ್‌­ನಲ್ಲಿ ಬೆಳಿಗ್ಗೆ ತಿಂಡಿ ಮುಗಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಾಡಿದರು. ರಸ್ತೆ ಬದಿಗಳಲ್ಲಿನ ಪೆಟ್ಟಿಗೆ ಅಂಗಡಿಗಳಲ್ಲಿ ನಿಂತು ಸಿಗರೇಟ್‌ ಸೇದುತ್ತಾ ತಂಪು ಪಾನೀಯಗಳನ್ನು ಸೇವಿಸಿದರು. ಬಳಿಕ ತಮಗಾಗಿ  ಮೀಸಲಾಗಿದ್ದ ಮೂರು  ಬಸ್‌ನಲ್ಲಿ ಕಾರವಾರ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂತಸ ಪಟ್ಟರು.ಮಧ್ಯಾಹ್ನ ಬಿಸಿಲು ನೆತ್ತಿ ಮೇಲೇರುತ್ತಿದ್ದ ಹಾಗೆ ಎಲ್ಲರೂ ರವೀಂದ್ರನಾಥ ಟ್ಯಾಗೋರ್‌ ಕಡಲ­ತೀರಕ್ಕೆ ತೆರಳಿ ನೀರಿಗಿಳಿದು ಅಲ್ಲಿನ ಅಲೆಗಳಿಗೆ ಮೈ ಯೊ­ಡಿದ್ದರು. ಕಡಲತೀರದ ಪ್ರಕೃತಿ ಸೌಂದ­ರ್ಯ­ ಸವಿದ ಅವರು ಬ್ಯಾಗ್‌ನಲ್ಲಿ ತಂದಿದ್ದ ಕ್ಯಾಮೆರಾ  ಹೊರತೆಗೆದು ಫೋಟೋ ಕ್ಲಿಕಿಸಿ ದರು. ಅರೆಬೆತ್ತ ಲಾಗಿ ಕಡಲತೀರದಲ್ಲೇ ಸಿಗರೇಟ್‌ ಹಾಗೂ ಮದ್ಯ ಸೇವನೆ ಮಾಡುತ್ತಾ ಮಜಾ ಮಾಡುತ್ತಿದ್ದರು. ಇದನ್ನು ಕಂಡ ಸ್ಥಳೀ ಯರು ಮುಜುಗರ ಅನುಭವಿ­ಸುವಂತಾ­ಯಿತು. ಅಷ್ಟರಲ್ಲಿ ವಿಷಯ ತಿಳಿದ ಸಬ್‌ಇನ್‌ಸ್ಪೆಕ್ಟರ್‌ ಆನಂದ್‌ ಮೂರ್ತಿ ಸ್ಥಳಕ್ಕೆ ಬಂದು, ‘ಕಡಲ­ತೀರದಲ್ಲಿ ಮದ್ಯ ಸೇವನೆ ನಿಷಿದ್ಧ. ಆದ್ದರಿಂದ ಇಲ್ಲಿ ಮದ್ಯ ಸೇವಿಸಬೇಡಿ’ ಎಂದು ತಿಳಿ ಹೇಳಿದ ಮೇಲೆ ಎಲ್ಲರೂ ಮದ್ಯದ ಬಾಟಲಿಗಳನ್ನು ಚೀಲಗಳಿಗೆ ತುಂಬಿಕೊಂಡರು.ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ:  ದೇಶದ ಅತಿ­ದೊಡ್ಡ ಯುದ್ಧನೌಕೆ  ‘ವಿಕ್ರಮಾದಿತ್ಯ’, ಐದಕ್ಕೂ ಹೆಚ್ಚು ಬೆಂಗಾವಲು ಯುದ್ಧನೌಕೆಯೊಂದಿಗೆ ಮಂಗ­ಳ­ವಾರ ರಾತ್ರಿ ಇಲ್ಲಿನ ಕದಂಬ ನೌಕಾ­ನೆಲೆಯಲ್ಲಿ ಲಂಗರು ಹಾಕಿದೆ. ನೌಕೆಯೊಂದಿಗೆ 1,600 ಸಿಬ್ಬಂದಿ ಹಾಗೂ ರಷ್ಯಾದ 183  ತರಬೇತುದಾರರು ಬಂದಿದ್ದಾರೆ. ನೌಕಾನೆಲೆಯಲ್ಲಿ ವಸತಿ ಸೌಲಭ್ಯದ ಕೊರತೆ ಕಾರಣ ರಷ್ಯಾದ ತರಬೇತುದಾರರಿಗೆ ನಗರದ ಹೋಟೆಲ್‌ಗಳಲ್ಲಿ 1 ವರ್ಷದ ಅವಧಿಗೆ ಕೊಠಡಿ ಕಾಯ್ದಿರಿಸಲಾಗಿದೆ. ರಷ್ಯನ್‌ ಶೈಲಿ ಭೋಜನದ ವ್ಯವಸ್ಥೆ ಮಾಡ­ಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry