ಗುರುವಾರ , ಮೇ 26, 2022
31 °C

ಕಡಲತೀರ ಅಭಿವೃದ್ಧಿಗೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಇಲ್ಲಿಯ ರವೀಂದ್ರನಾಥ ಟ್ಯಾಗೋರ ಕಡಲತೀರ ಸ್ವಚ್ಛತೆಗೆ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಸೂರ್ಯಾಸ್ತ ವೀಕ್ಷಣೆಗೆ ಸ್ಥಳಾವಕಾಶ. ಸ್ವಚ್ಚತೆಗೆ ಆದ್ಯತೆ ನೀಡುವುದು ಯೋಜನೆಯಲ್ಲಿ ಸೇರಿದೆ.ಕಡಲತೀರದಲ್ಲಿ ಮಲವಿಸರ್ಜನೆಗೆ ಕಡಿವಾಣ ಹಾಕಲು ಹಾಗೂ ಸ್ವಚ್ಛತೆ ಕಾಪಾಡಲು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಈಗಾಗಲೇ ಕ್ರಮ ಕೈಗೊಂಡಿದ್ದು ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ನೇಮಿಸಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಎರಡು ಗಂಟೆಗಳ ಕಾಲ ತೀರದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.ಉದ್ಯಾನವನಕ್ಕೆ ಮೆರಗು:  ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಡಲತೀರದಲ್ಲಿರುವ ಉದ್ಯಾನ ನವೀಕರಣಕ್ಕೆ ಈಗಾಗಲೇ ಚಾಲನೆ ದೊರಕಿದ್ದು  ಹೂವಿ ಗಿಡಗಳು ಸೇರಿದಂತೆ ಅಲಂಕಾರಿಕ ಗಿಡಗಳನ್ನು ಉದ್ಯಾನದಲ್ಲಿ ನೆಡಸಲಾಗಿದ್ದು ಕಡಲತೀರದ ಆಕರ್ಷಣೆಯ ಕೇಂದ್ರವಾಗಿದೆ. ಕಡಲ ತೀರಕ್ಕೆ ತೆರಳುವ   ಸಾರ್ವಜನಿಕರು ಇದರಿಂದ ನೆಮ್ಮದಿಗೊಳ್ಳುವಂತಾಗಿದೆ.ನಗರದ ಲಂಡನ್ ಸೇತುವೆಯಿಂದ ಬೈತಖೋಲ ಮಧ್ಯೆ, ರಾಷ್ಟ್ರೀಯ ಹೆದ್ದಾರಿ-17 ಪಕ್ಕದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸುಮಾರು ರೂ. 25 ಲಕ್ಷ ವೆಚ್ಚದ ಅಭಿವೃದ್ಧಿ ಯೋಜನೆ ಯೊಂದನ್ನು ರೂಪಿಸಲಾಗಿದೆ. ಈ ಕಾಮಗಾರಿಯಿಂದ ನಗರದ ಸೌಂದರ್ಯ ಇನ್ನಷ್ಟು ಹೆಚ್ಚಲಿದೆ.ಪ್ರವಾಸಿಗರ ಅನುಕೂಲಕ್ಕಾಗಿ ಸೌಲಭ್ಯಗಳನ್ನು ಕಲ್ಪಿಸಲು ಬೈತಖೋಲ ಹಾಗೂ ಬಿಷಪ್ ಹೌಸ್ ಎದುರು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸೇರಿ ಒಟ್ಟು ರೂ.24.82 ಲಕ್ಷದ  ಯೋಜನೆ ರೂಪಿಸಿದೆ.ಬೈತಖೋಲ ಬಳಿ ಸಮುದ್ರ ತಡೆಗೋಡೆಯನ್ನು ಸಮತಟ್ಟುಗೊಳಿಸಿ, ಕಾಂಕ್ರಿಟ್ ಮೆಟ್ಟಿಲುಗಳನ್ನು ನಿರ್ಮಿಸುವುದು, ಮೆಟ್ಟಿಲುಗಳ ತುದಿಯಲ್ಲಿ ಕಬ್ಬಿಣದ ರೆಲಿಂಗ್ ಅಳವಡಿಸುವುದು, ಕಾಂಕ್ರಿಟ್ ಮೆಟ್ಟಿಲುಗಳ ಮೇಲೆ ಕುಳಿತು ಸಮುದ್ರದ ಸೌಂದರ್ಯ ಸವಿಯಲು ಅವಕಾಶ ಕಲ್ಪಿಸುವುದು, ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಈ ಯೋಜನೆಯಲ್ಲಿ ಸೇರಿದೆ.ಈ ಸ್ಥಳದಲ್ಲಿ ಬಾದಾಮಿ ಸಸಿಗಳನ್ನು ಬೆಳೆಸುವುದೂ ಈ ಯೋಜನೆಯಲ್ಲಿ ಸೇರಿದೆ. ಬೈತಖೋಲ ಬಳಿ ಸಿಮೆಂಟ್ ಕಾಂಕ್ರಿಟ್ ಗೋಡೆ ಹಾಗೂ ಮೆಟ್ಟಿಲುಗಳ ನಿರ್ಮಾಣಕ್ಕೆ ರೂ. 4.93 ಲಕ್ಷ, ಬಿಷಪ್ ಹೌಸ್ ಬಳಿ ಕಾಂಕ್ರಿಟ್ ಗೋಡೆಗೆ ರೂ. 4.93 ಲಕ್ಷ , ವಾಹನಗಳ ತಂಗುದಾಣಕ್ಕೆ ರೂ. 4.99 ಲಕ್ಷ, ಸಾರ್ವಜನಿಕರಿಗೆ ಆಸನ ವ್ಯವಸ್ಥೆಗಾಗಿ ರೂ. 4.97 ಲಕ್ಷ ಹಗೂ ಕಬ್ಬಿಣದ ರೆಲಿಂಗ್ ಅಳವಡಿಕೆಗೆ ರೂ. 4.97 ಲಕ್ಷದ ಪ್ರಸ್ತಾವ ಸಲ್ಲಿಸಲಾಗಿದೆ.ಒಟ್ಟಾರೆ ಕಾರವಾರದ ಕಡಲ ತೀರವನ್ನು ನಳನಳಿಸುವಂತೆ ಮಾಡುವ ದಿಸೆಯಲ್ಲಿ ವಿವಿಧ ಯೋಜನೆಗಳು ಜಾರಿಯಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.