ಕಡಲಾಚೆ ಯಕ್ಷ ಝಲಕ್

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕಡಲಾಚೆ ಯಕ್ಷ ಝಲಕ್

Published:
Updated:

ನಮ್ಮ ನಾಡಿನ ಕಲೆ ಯಕ್ಷಗಾನ ಫಿಲಿಪೀನ್ಸ್‌ನಲ್ಲೂ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಯಿತು. ಅದೂ ಎಷ್ಯದ ನೊಬೆಲ್ ಎಂದೇ ಖ್ಯಾತವಾದ `ಮ್ಯೋಗ್ಸೆಸೆ~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ.ಕನ್ನಡ ನಾಡಿಗೆ ಖ್ಯಾತಿ ತಂದು ಕೊಟ್ಟ ಡಾ. ಹರೀಶ ಹಂದೆ ಈ ಪ್ರಶಸ್ತಿ ಫಿಲಿಫೀನ್ಸ್ ರಾಜಧಾನಿ ಮನಿಲಾಕ್ಕೆ ಹೋಗಿದ್ದರು. ಅವರೊಡನೆ ಸೆಲ್ಕೋ ಸೋಲಾರ್ ಸಂಸ್ಥೆ ಹಿರಿಯ ಅಧಿಕಾರಿ ಉತ್ತರ ಕನ್ನಡ ಕುಮಟಾದ ಮೋಹನ ಭಾಸ್ಕರ ಹೆಗಡೆಯವರೂ ಇದ್ದರು.ಮೋಹನ್ ಬೆಂಗಳೂರಿನ ಯಕ್ಷದೇಗುಲದಲ್ಲಿ ಹಾಗೂ ಯಕ್ಷಗಾನದ ಮೇರುನಟ ಡಾ. ಕೆರೆಮನೆ ಮಹಾಬಲ ಹೆಗಡೆಯವರಲ್ಲಿ ಯಕ್ಷಗಾನವನ್ನು ಕಲಿತವರು. ಇದು ಪ್ರಶಸ್ತಿ ಸಮಿತಿಯವರ ಗಮನಕ್ಕೆ ಬಂತು.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷಗಾನ ಪ್ರದರ್ಶಿಸಲು ಅವಕಾಶ ನೀಡಿದರು. ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿದ್ದ ಯಕ್ಷಗಾನದ ಹಾಡಿಗೆ ಸಹಜ ಉಡುಪಿನಲ್ಲಿಯೇ ಹೆಜ್ಜೆ ಹಾಕಿ ಅಭಿನಯಿಸಿದ ಮೋಹನ್ ವೀಕ್ಷಕರನ್ನು ಬೆರಗುಗೊಳಿಸಿದರು.ಅವರ ಯಕ್ಷಗಾನ ಕಂಡು ಪುಳಕಿತರಾದವರಲ್ಲಿ ಫಿಲಿಪೀನ್ಸ್‌ನ ಸಾವಿರಕ್ಕೂ ಹೆಚ್ಚು ಗಣ್ಯರು, ಭಾರತದ ರಾಯಭಾರಿ ದೇವೇಂದ್ರಕುಮಾರ್ ಸೇರಿದ್ದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry