ಕಡಲ್ಗಳ್ಳತನ ನಿಯಂತ್ರಣಕ್ಕೆ ಭಾರತ ಸಲಹೆ

7

ಕಡಲ್ಗಳ್ಳತನ ನಿಯಂತ್ರಣಕ್ಕೆ ಭಾರತ ಸಲಹೆ

Published:
Updated:

ಲಂಡನ್ (ಐಎಎನ್‌ಎಸ್): ಸೋಮಾಲಿಯಾದಲ್ಲಿ ಹೆಚ್ಚುತ್ತಿರುವ ಕಡಲುಗಳ್ಳತನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತವು,  `ಅಂತರ್ ಯುದ್ಧದಿಂದ ಬಳಲಿರುವ ಆ ದೇಶ ದಲ್ಲಿ ಸುಭದ್ರತೆ ಸ್ಥಾಪನೆಯೇ ಪರಿಹಾರವಾಗಿದ್ದು ಇದಕ್ಕೆ ವಿಶ್ವದ ಎಲ್ಲ ರಾಷ್ಟ್ರಗಳು ಪ್ರಯತ್ನಿಸಬೇಕು~ ಎಂದು ಶುಕ್ರವಾರ ಇಲ್ಲಿ ಜಾಗತಿಕ ಸಮಾವೇಶದಲ್ಲಿ ಒತ್ತಾಯಿಸಿದೆ.ಸೋಮಾಲಿಯಾದಲ್ಲಿ ಹಿಂಸಾಚಾರ ಕೊನೆಗೊಂಡು ಶಾಂತಿ ಸ್ಥಾಪಿಸಲು ವಿಶ್ವಸಂಸ್ಥೆಯ ನೇತೃತ್ವದಲ್ಲಿ ಅಂತರ ರಾಷ್ಟ್ರೀಯವಾಗಿ ಕೈಗೊಳ್ಳುವ ಕ್ರಮಗಳಿಗೆ ಭಾರತದ ಸಂಪೂರ್ಣ ಬೆಂಬಲವಿದೆ ಎಂದು ಸಮಾವೇಶದಲ್ಲಿ ಪಾಲ್ಗೊಂ ಡಿರುವ ವಿದೇಶಾಂಗ ರಾಜ್ಯ ಸಚಿವ ಇ. ಅಹಮದ್ ಹೇಳಿದ್ದಾರೆ.ನ್ಯೂಯಾರ್ಕ್ ವರದಿ:  ಸೋಮಾಲಿಯಾ ಕಡಲುಗಳ್ಳತನದ ನಿಯಂತ್ರಣಕ್ಕೆ ಹಾಗೂ ಕಡಲ್ಗಳ್ಳರನ್ನು ಶಿಕ್ಷಿಸಲು ಅಲ್ಲಿನ ಸರ್ಕಾರವೇ ಕಡಲುಗ್ಗಳತನ ನಿಗ್ರಹ ಕಾಯಿದೆಯನ್ನು ಜಾರಿಗೆ ತರಬೇಕೆಂದು ಭಾರತ ಶುಕ್ರವಾರ ಸಲಹೆ ನೀಡಿದೆ.`ಕಡಲುಗಳ್ಳತನ ನಿಗ್ರಹ ಕಾಯಿದೆಯನ್ನು ಸೋಮಾಲಿಯಾ ಸೇರಿದಂತೆ ಆಫ್ರಿಕಾ ರಾಷ್ಟ್ರಗಳು ಜಾರಿಗೆ ತರಬೇಕೇ ಹೊರತು ಹೊರರಾಷ್ಟ್ರಗಳಿಂದ ಸಾಧ್ಯವಿಲ್ಲ~ ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿರುವ ಉಪರಾಯಭಾರಿ ಮಂಜೀವ್ ಸಿಂಗ್ ಪುರಿ ಅವರು  ಸೋಮಾಲಿಯ ಪರಿಸ್ಥಿತಿ ಕುರಿತ ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry