`ಕಡಲ್' ವಿವಾದದ ಅಲೆಯಲ್ಲಿ

7

`ಕಡಲ್' ವಿವಾದದ ಅಲೆಯಲ್ಲಿ

Published:
Updated:
`ಕಡಲ್' ವಿವಾದದ ಅಲೆಯಲ್ಲಿ

ಚೆನ್ನೈ (ಪಿಟಿಐ): ವಿಶ್ವರೂಪಂ ಚಿತ್ರದ ವಿವಾದ ಬಗೆಹರಿದ ಬೆನ್ನಲೇ ಖ್ಯಾತ ನಿರ್ದೇಶಕ ಮಣಿರತ್ನಂ ಅವರ `ಕಡಲ್' ಚಿತ್ರ ಇದೀಗ ವಿವಾದಕ್ಕೆ ಗುರಿಯಾಗಿದೆ.ಚಿತ್ರದಲ್ಲಿ ಕ್ರೈಸ್ತ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂದು ಕೆಲ ಕ್ರೈಸ್ತ ಸಂಘಟನೆಗಳು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ. ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.ಕಡಲ್ ಚಿತ್ರದಲ್ಲಿ ನಟ ಕಾರ್ತಿಕ್ ಪುತ್ರ ಗೌತಮ್ ಮತ್ತು ಖ್ಯಾತ ನಟಿ ರಾಧಾ ಪುತ್ರಿ ತುಳಸಿ ಅಭಿನಯಿಸಿದ್ದಾರೆ. ಘಟನೆ ಸಂಬಂಧ ಈವರೆಗೂ ನಿರ್ದೇಶಕ ಮಣಿರತ್ನಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry