ಕಡಲ ತಡಿಯಲ್ಲಿ ಇಟಲಿ ಖಾದ್ಯದ ಘಮ..

7

ಕಡಲ ತಡಿಯಲ್ಲಿ ಇಟಲಿ ಖಾದ್ಯದ ಘಮ..

Published:
Updated:

ಮಂಗಳೂರು: ಅವರೆಲ್ಲ ಇಟಲಿ ದೇಶದ ಆಹಾರದ ಬಗ್ಗೆ ಕೇಳಿದ್ದರು. ಅವುಗಳ ಸವಿಯ ಬಗ್ಗೆಯೂ ಕೇಳಿ ತಿಳಿದಿದ್ದರು. ಆದರೆ, ಆ ಖಾದ್ಯಗಳನ್ನು ಸ್ವತಃ ಸವಿಯುವ ಅವಕಾಶ ಲಭಿಸಿ ಅದನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳುವ ಅವಕಾಶವೂ ಅವರಿಗೆ ಒದಗಿಬಂದಿತ್ತು. ಅದಕ್ಕಿಂತಲೂ ಮುಖ್ಯವಾಗಿ ಆ ದೇಶದ ‘ಚೆಫ್‌’ ಒಬ್ಬರು ಅಲ್ಲಿನ ಖಾದ್ಯಗಳನ್ನು ತಯಾರಿಸುವ ವಿಧಾನಗಳನ್ನು ಹೇಳಿ ಕೊಟ್ಟದ್ದೂ ಸಂಭ್ರಮವೇ ಸರಿ. ಅಲ್ಲಿದ್ದ ವಿದ್ಯಾರ್ಥಿಗಳಿಗೆಲ್ಲ ಈ ಅವಕಾಶವೂ ಸಿಕ್ಕಿತು.ಅಲ್ಲಿದ್ದ ಇಟಲಿ ಆಹಾರಗಳನ್ನು ಕುತೂ­ಹಲದ ಕಣ್ಣುಗಳಿಂದ ನೋಡುವ ಅವಕಾಶ ಸಿಕ್ಕಿದ್ದು, ನಗರದ ಹೊರವಲಯದ ಕೊಡಕ್ಕಲ್‌­ನಲ್ಲಿ ಇರುವ ಸರೋಷ್‌ ಇನ್ಸ್‌ಟಿಟ್ಯೂಟ್‌ ಆಫ್‌ ಹೋಟೆಲ್‌ ಅಡ್ಮಿನಿಸ್ಟ್ರೇಷನ್‌ ಇಟೆಲಿಯ ‘ಆಲ್ಮ’ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಾಲೇಜು ಬುಧವಾರ ಹಮ್ಮಿಕೊಂಡಿದ್ದ ‘ಇಟಲಿ ಖಾದ್ಯ’ಗಳ ಕುರಿತ ವಿಚಾರಸಂಕಿರಣದಲ್ಲಿ.ಇಟಲಿಯ ಮಧ್ಯಾಹ್ನದ ಊಟವನ್ನು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದವರಿಗೆ ಉಣಬಡಿಸಲಾಯಿತು. ವಿಶೇಷ ಎಂದರೆ ಒಂದು ಬಗೆಯ ಖಾದ್ಯವನ್ನು ಎಲ್ಲರೂ ಸೇವಿಸಿದ ಬಳಿಕವೇ ಮತ್ತೊಂದು ಬಗೆಯ ಖಾದ್ಯವನ್ನು ಬಡಿಸಲಾಯಿತು. ಮಧ್ಯಾಹ್ನದ ಬಳಿಕ ಖಾದ್ಯ ತಯಾರಿಯನ್ನು ಪ್ರಾತ್ಯಕ್ಷಿಕೆ ಮೂಲಕ ಇಟಲಿಯ ಚೆಫ್‌ ಬ್ರೂನೊ ರುಫಿನಿ ವಿವರವಾಗಿ ತಿಳಿಸಿದರು.ಭಾರತೀಯ ಹೋಟೆಲ್‌ ಮ್ಯಾನೇಜ್‌­ಮೆಂಟ್‌ ಕಾಲೇಜುಗಳ ವಿದ್ಯಾರ್ಥಿಗಳಲ್ಲೂ ಇಟಲಿ ಖಾದ್ಯಗಳ ಬಗ್ಗೆ ಜಾಗೃತಿ ಮೂಡಿಸ­ಬೇಕು ಎಂಬ ಉದ್ದೇಶದಿಂದ ‘ಆಲ್ಮ’ ಸಂಸ್ಥೆಯ ಅಧ್ಯಯನ ಪಾಲುದಾರ ಸಂಸ್ಥೆಯಾಗಿರುವ ಸರೋಷ್‌ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿ­ಕೊಳ್ಳಲಾಗಿದೆ ಎಂದು  ಪ್ರಾಂಶು­ಪಾಲ­ರಾದ ಡಾ.ಇಂದಿರಾ ಕಂದಸ್ವಾಮಿ ತಿಳಿಸಿದರು.ಬ್ರೂನೊ ಮಾತನಾಡಿ, ದಕ್ಷಿಣ ಭಾರತದ ಪ್ರಮುಖ ಮೂರು ಕಾಲೇಜುಗಳು ಮಾತ್ರ ‘ಆಲ್ಮ’ದ ಅಧ್ಯಯನ ಪಾಲುದಾರ ಕಾಲೇಜು­ಗಳಾಗಿವೆ. ಅವುಗಳ ಪೈಕಿ ಮಂಗಳೂರಿನ ಸರೋಷ್‌ ಕಾಲೇಜು ಕೂಡ ಒಂದು. ಮುಂದಿನ ದಿನಗಳಲ್ಲಿ ಪುಣೆ ಮತ್ತು ಗುಜರಾತ್‌ನ ಪ್ರಮುಖ ಕಾಲೇಜುಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಮುಂದಿನ ವಾರ ಬೆಂಗಳೂರು ಮತ್ತು ಚೆನ್ನೈನಲ್ಲಿ ಇದೇ ಮಾದರಿಯ ವಿಚಾರ ಸಂಕಿರಣ ಹಮ್ಮಿ­ಕೊಳ್ಳಲಾಗುವುದು ಎಂದು ಹೇಳಿದರು.ಒನ್‌ ಟು ಒನ್‌ ಬಿಸಿನೆಸ್‌ ಪರ್ಸ್‌ಪೆಕ್ಟಿವ್‌ ಕನ್ಸಲ್ಟೆನ್ಸಿಯ ವ್ಯವಸ್ಥಾಪಕ ನಿರ್ದೇಶಕ ಸನ್ನಿ ಮೆನನ್‌, ಸರೋಷ್‌ ಕಾಲೇಜು ಪ್ರಾಧ್ಯಾಪಕ­ರಾದ ಟೆರೆನ್ಸ್‌ ರಾಡ್ರಿಗಸ್‌, ಧನ್ಯಾ ಸಿ.ಮೆನನ್‌ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry