ಕಡಿಮೆ ಅಪಘಾತ, ಮೃತರ ಸಂಖ್ಯೆ ಹೆಚ್ಚಳ

7
2013ರಲ್ಲಿ 5,230 ಅಪಘಾತಗಳು!

ಕಡಿಮೆ ಅಪಘಾತ, ಮೃತರ ಸಂಖ್ಯೆ ಹೆಚ್ಚಳ

Published:
Updated:

ಬೆಂಗಳೂರು: ನಗರದಲ್ಲಿ ಕಳೆದ ವರ್ಷ (೨೦೧೩) ಸಂಭವಿಸಿದ ಅಪಘಾತಗಳ ಸಂಖ್ಯೆ 5,230! ಈ ಅಪಘಾತಗಳಲ್ಲಿ 771 ಮಂದಿ ಮೃತಪಟ್ಟಿದ್ದರೆ, 4,289 ಮಂದಿ ಗಾಯಗೊಂಡಿದ್ದಾರೆ.ಇದನ್ನು ಪೊಲೀಸ್‌ ಇಲಾಖೆಯ ಅಂಕಿ ಅಂಶಗಳೇ ಹೇಳುತ್ತಿವೆ. ಆದರೆ, ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಪಘಾತಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದೆ.‘ವಾಹನ ಚಾಲನೆ ವೇಳೆ ಸೀಟ್‌ ಬೆಲ್ಟ್‌ ಧರಿಸುವುದು, ಪಾನಮತ್ತ ಚಾಲನೆ ವಿರುದ್ಧ ಅಭಿಯಾನ, ಪಾದ­ಚಾರಿ ಮಾರ್ಗಗಳ ಬಳಕೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ನಾಗರಿಕರಿಗೆ ಅರಿವು ಮೂಡಿಸುತ್ತಿ ರುವು­ದರಿಂದ ಅಪಘಾತ ಗಳು ಕಡಿಮೆ­ಯಾಗಿವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.2010ರಲ್ಲಿ ನಗರದಲ್ಲಿ 6,483 ಅಪಘಾತಗಳು ಸಂಭವಿಸಿ, 858 ಮಂದಿ ಮೃತಪಟ್ಟಿದ್ದರು. ನಂತರದ ವರ್ಷದಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆಯು 6,024ಕ್ಕೆ ಇಳಿಕೆಯಾಯಿತು. ಜತೆಗೆ ಮೃತರ ಸಂಖ್ಯೆ ಕೂಡ 762ಕ್ಕೆ ಇಳಿ­ಯಿತು. ಅದೇ ರೀತಿ 2012ರಲ್ಲಿ ಸಂಭವಿ­ಸಿದ 5,502 ಅಪಘಾತಗಳಲ್ಲಿ 755 ಮಂದಿ ಜೀವ ಕಳೆದುಕೊಂಡರು. 2013­ರಲ್ಲಿ ಒಟ್ಟು 5,230 ಅಪಘಾತಗಳು ನಡೆದಿದ್ದು, 771 ಮಂದಿ ಸಾವನ್ನಪ್ಪಿದ್ದಾರೆ.ಪೂರ್ವ ವಿಭಾಗದಲ್ಲಿ 2012ರಲ್ಲಿ 2,256 ಅಪಘಾತಗಳು ಸಂಭವಿಸಿ, 343 ಮಂದಿ ಮೃತಪಟ್ಟಿದ್ದರು. ಕಳೆದ ವರ್ಷ ಸಂಭವಿಸಿದ  2,263 ಅಪಘಾತ ಗಳಿಂದ 361 ಮಂದಿ ಸಾವನ್ನಪ್ಪಿದ್ದಾರೆ.‘ಮೇಲ್ನೋಟಕ್ಕೆ ಅಪಘಾತ ಪ್ರಕ-ರಣಗಳ ಸಂಖ್ಯೆಯಲ್ಲಿ ಹೆಚ್ಚಳ ವಾದಂತೆ ತೋರುತ್ತದೆ. ಆದರೆ, ವರ್ಷ­ದಿಂದ ವರ್ಷಕ್ಕೆ ನಗರದ ಜನಸಂಖ್ಯೆ ಹಾಗೂ ರಸ್ತೆಗಿಳಿಯುವ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ಅಂಕಿ ಅಂಶಗಳಿಂದ ಅಪಘಾತ­ಗಳ ಸಂಖ್ಯೆಯ ಏರಿಳಿತಗಳನ್ನು ಅಳೆಯ­ಬಾರದು. ಅಪಘಾತಗಳ ನಿಯಂತ್ರಣಕ್ಕೆ ಇಲಾಖೆ ಸಾಕಷ್ಟು ಸುರಕ್ಷತಾ ಕ್ರಮ­ಗಳನ್ನು ಕೈಗೊಂಡಿದೆ’ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಎಂ.ಎನ್‌. ಬಾಬು ರಾಜೇಂದ್ರ ಪ್ರಸಾದ್ ಹೇಳುತ್ತಾರೆ.‘ನಗರದ ರಸ್ತೆಗಳು ಹಾಳಾಗಿರು ವುದರಿಂದ ಅಪಘಾತಗಳ ನಿಯಂತ್ರಣ ಕಷ್ಟವಾಗುತ್ತಿದೆ. ಬಿಬಿಎಂಪಿ, ಬಿಡಿಎ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ಕಾಮಗಾರಿ ಉದ್ದೇಶ ದಿಂದ ರಸ್ತೆಗಳನ್ನು ಅಗೆದು, ದುರಸ್ತಿ ಮಾಡದೆ ಬಿಟ್ಟಿರುತ್ತವೆ. ಜತೆಗೆ ರಸ್ತೆ ಮಧ್ಯೆ ಬಿದ್ದಿರುವ ಗುಂಡಿಗಳು ಸಹ ಅಪಘಾತಕ್ಕೆ ಆಹ್ವಾನಿಸುತ್ತಿವೆ’ ಎಂದರು.ಪಶ್ಚಿಮ ವಿಭಾಗದಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. 2012ರಲ್ಲಿ 3,246 ಅಪಘಾತಗಳು ಸಂಭವಿಸಿದ್ದು, 412 ಮಂದಿ ಮೃತ ಪಟ್ಟಿದ್ದರು. 2013ರಲ್ಲಿ 2,967 ಅಪಘಾತ ಪ್ರಕರಣಗಳು ದಾಖ ಲಾಗಿದ್ದು, 410 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ.ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿ ಕ್ರಿಯಿಸಿದ ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಎಸ್. ಗಿರೀಶ್, ‘ನಿಯಮ ಉಲ್ಲಂಘಿಸುವ

ಸವಾರರಿಗೆ ಸ್ಥಳದಲ್ಲೇ ದಂಡ ವಿಧಿಸುವುದು, ಕೆಲ ವೊಮ್ಮೆ ಪರವಾನಗಿ ರದ್ದು ಮಾಡು ವುದು ಸೇರಿ ದಂತೆ ಇತ್ತೀಚೆಗೆ ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಗಳಾಗಿವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry