ಕಡಿಮೆ ದರದಲ್ಲಿ ಡೀಸೆಲ್ ಪೂರೈಕೆಗೆ ಮನವಿ

ಶನಿವಾರ, ಜೂಲೈ 20, 2019
22 °C

ಕಡಿಮೆ ದರದಲ್ಲಿ ಡೀಸೆಲ್ ಪೂರೈಕೆಗೆ ಮನವಿ

Published:
Updated:

ಬೆಂಗಳೂರು: `ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಕಡಿಮೆ ದರದಲ್ಲಿ ಡೀಸೆಲ್ ಒದಗಿಸುವಂತೆ ಕೋರಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ' ಎಂದು ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ ಸೋಮವಾರ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.ಸದಸ್ಯ ದೊಡ್ಡರಂಗೇಗೌಡ ಕೇಳಿದ ಪ್ರಶ್ನೆಗೆ ಅವರು ಲಿಖಿತ ಉತ್ತರ ಒದಗಿಸಿದ್ದಾರೆ. `ಪ್ರಧಾನ ಮಂತ್ರಿ ಮತ್ತು ಪೆಟ್ರೋಲಿಯಂ ಸಚಿವರು ಇಬ್ಬರಿಗೂ ಮನವಿ ಮಾಡಲಾಗಿದೆ. ಬಸ್ಸುಗಳಿಗೆ ಟೋಲ್ ದರವನ್ನು ರದ್ದುಪಡಿಸುವ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗುವುದು' ಎಂದು ಹೇಳಿದ್ದಾರೆ.`ಮಾಸಿಕ ಪಾಸ್‌ಗಳಿಗೆ ಇನ್ನಷ್ಟು ರಿಯಾಯಿತಿ ನೀಡಲು ಸಾಧ್ಯವಿಲ್ಲ. ವೇತನ ಪರಿಷ್ಕರಣೆ ಮತ್ತು ತುಟ್ಟಿ ಭತ್ಯೆ ವಿಲೀನದ ಪರಿಣಾಮ ಸಾರಿಗೆ ಸಂಸ್ಥೆಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ' ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry