ಶುಕ್ರವಾರ, ಜೂನ್ 18, 2021
26 °C

ಕಡಿಮೆ ಮತ ಪಡೆದೂ ಗೆದ್ದರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಳೆದ ಚುನಾ­ವಣೆಯಲ್ಲಿ 29 ಅಭ್ಯರ್ಥಿಗಳು ಚಲಾ­ವಣೆ­ಯಾದ ಒಟ್ಟು ಮತಗಳ ಪೈಕಿ ಶೇ 30ಕ್ಕಿಂತ ಕಡಿಮೆ ಮತ ಪಡೆದು ಲೋಕ­ಸಭೆಗೆ ಆಯ್ಕೆ­­ಯಾಗಿದ್ದರು ಎಂದು ‘ಫಸ್ಟ್‌ ಪಾಸ್ಟ್‌ ದಿ ಪೋಸ್ಟ್‌ ಸಿಸ್ಟಮ್‌’ (ಎಫ್‌ಪಿಟಿಪಿ) ತಿಳಿಸಿದೆ. ಉತ್ತರ ಪ್ರದೇಶದಿಂದ 14 ಜನ ಆಯ್ಕೆಯಾಗಿದ್ದರೆ, ಜಾರ್ಖಂಡ್‌ನಿಂದ 6, ಮಧ್ಯ ಪ್ರದೇಶದಿಂದ ಇಬ್ಬರು, ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದಿಂದ ತಲಾ ಒಬ್ಬರು, ಚಲಾವಣೆಯಾದ ಒಟ್ಟು ಮತಗಳ ಪೈಕಿ  ಶೇ 30ಕ್ಕಿಂತ ಕಡಿಮೆ ಮತ ಪಡೆದು ಆಯ್ಕೆಯಾಗಿದ್ದರು.ಒಂದು ಕ್ಷೇತ್ರದಲ್ಲಿ ಅತ್ಯಧಿಕ ಮತ ಗಳಿಸುವ ಅಭ್ಯರ್ಥಿ ಚುನಾವಣೆಯಲ್ಲಿ ಜಯ ಗಳಿಸುತ್ತಾನೆ. ಕ್ಷೇತ್ರವೊಂದರಲ್ಲಿ ಅನೇಕ ಪಕ್ಷಗಳ ಅಭ್ಯರ್ಥಿಗಳು ಚುನಾ­ವಣೆಗೆ ನಿಂತರೆ ಅಲ್ಲಿ ಮತಗಳು ವಿಭಜನೆ­ಯಾಗುತ್ತವೆ. ಇದರಿಂದ ಸಹಜವಾಗಿ­ಯೇ ಗೆಲುವು ಸಾಧಿಸುವ ಅಭ್ಯರ್ಥಿ ಶೇ 50ಕ್ಕಿಂತ ಕಡಿಮೆ ಮತ ಗಳಿಸುತ್ತಾನೆ ಎಂದು ‘ಎಫ್‌ಪಿಟಿಪಿ’ ವಿವರಿಸಿದೆ.ಚಲಾವಣೆಯಾದ ಒಟ್ಟು ಮತಗಳ ಪೈಕಿ ಕೇವಲ ಶೇ 21.27ರಷ್ಟು ಮತ ಪಡೆದು ಬಿಹಾರದ ಬಕ್ಸರ್‌ ಲೋಕಸಭೆ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿ ಜಗನಂದ್‌ ಸಿಂಗ್‌ ಗೆಲುವು ಸಾಧಿಸಿದ್ದರು.  ಶೇ 30ಕ್ಕಿಂತ ಕಡಿಮೆ ಮತ ಪಡೆದು ಜಯ ಸಾಧಿಸಿದವರ ಪೈಕಿ ಇದು ಅತಿ ಕಡಿಮೆಯಾಗಿದೆ. ಬಿಹಾರದ ನವಾಡಾ ಲೋಕಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಬಿಜೆಪಿಯ ಭೋಲಾ ಸಿಂಗ್‌ ಅವರು ಶೇ 22.46 ಮತ ಗಳಿಸಿದ್ದರು.ಜಾರ್ಖಂಡ್‌ನ ಛತ್ರಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವಿನ ನಗೆ ಬೀರಿದ್ದ ಇಂದರ್‌ಸಿಂಗ್‌ ನಾಮಧಾರಿ ಶೇ 22.86, ಗೊಡ್ಡಾದಿಂದ ಆಯ್ಕೆಯಾಗಿದ್ದ ಬಿಜೆಪಿಯ ನಿಶಿಕಾಂತ್‌ ದುಬೆ ಶೇ 23.76, ಕೊದ್ರಮಾ ಕ್ಷೇತ್ರದಿಂದ ಜೆವಿಎಂ (ಪಿ)ದಿಂದ ಆಯ್ಕೆಯಾಗಿದ್ದ ಬಾಬುಲಾಲ್‌ ಮರಾಂಡಿ ಶೇ 22.55ರಷ್ಟು ಮತ ಗಳಿಸಿದ್ದರು.ಉತ್ತರ ಪ್ರದೇಶವೊಂದರಿಂದಲೇ 14 ಅಭ್ಯರ್ಥಿಗಳು ಶೇ 30ಕ್ಕಿಂತ ಕಡಿಮೆ ಮತ ಪಡೆದು ಆಯ್ಕೆಯಾಗಿದ್ದರು. ಗೊಂಡಾ ಕ್ಷೇತ್ರದಿಂದ ಜಯ ಸಾಧಿಸಿದ್ದ ಕಾಂಗ್ರೆಸ್‌ನ ಬೇನಿ ಪ್ರಸಾದ್‌ ವರ್ಮಾ ಶೇ 25.72ರಷ್ಟು ಮತ ಪಡೆದಿದ್ದರು. ಆಯ್ಕೆಯಾದ 14 ಅಭ್ಯರ್ಥಿಗಳಲ್ಲೇ ಇದು ಅತಿ ಕಡಿಮೆ.ಮಧ್ಯ ಪ್ರದೇಶದ ಸತ್ನಾ ಕ್ಷೇತ್ರದಿಂದ ಬಿಜೆಪಿಯ ಗಣೇಶ್‌ ಸಿಂಗ್‌ ಅವರು ಶೇ 29.51 ಮತ ಗಳಿಸಿ ಆಯ್ಕೆಯಾಗಿದ್ದರು. ರೇವಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಎಸ್‌ಪಿಯ ದಿಯೋರಾಜ್‌ ಸಿಂಗ್‌ ಪಟೇಲ್‌ ಶೇ 28.49 ಮತ ಗಳಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಲಡಾಖ್‌ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಹಸನ್‌ ಖಾನ್‌ ಅವರು ಶೇ 28.49 ಮತ ಗಳಿಸಿ ಆಯ್ಕೆಯಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.