ಕಡಿಮೆ ವೆಚ್ಚದ ಗೃಹ ಸಾಲ: ಶೇ 1 ಸಬ್ಸಿಡಿ

7

ಕಡಿಮೆ ವೆಚ್ಚದ ಗೃಹ ಸಾಲ: ಶೇ 1 ಸಬ್ಸಿಡಿ

Published:
Updated:

ನವದೆಹಲಿ, (ಪಿಟಿಐ): ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ, 15 ಲಕ್ಷ ರೂಪಾಯಿವರೆಗಿನ ಗೃಹಸಾಲಕ್ಕೆ ಶೇ 1 ಸಬ್ಸಿಡಿ ನೀಡುವುದಾಗಿ ಪ್ರಕಟಿಸಿದೆ.ಈ ಮೊದಲು ಕೇವಲ 10 ಲಕ್ಷ ರೂಪಾಯಿವರೆಗಿನ ಗೃಹಸಾಲಕ್ಕೆ ಮಾತ್ರ ಶೇ 1ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಈ ಬಾರಿ ಆ ಮಿತಿಯನ್ನು 15 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಅದರಂತೆ ಗೃಹ ನಿರ್ಮಾಣದ ಗರಿಷ್ಠ ವೆಚ್ಚವನ್ನು 20 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.ವಸತಿ ಕ್ಷೇತ್ರ ಬೆಳೆಯುತ್ತಿರುವ ವೇಗದ ಗತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಸದ್ಯದ ವಸತಿ ಯೋಜನೆಗಳ ಕುರಿತು ಉದಾರ ನೀತಿ ತಾಳಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry