ಸೋಮವಾರ, ಜೂನ್ 14, 2021
22 °C

ಕಡಿಮೆ ವೇತನ: ಕಂಪ್ಯೂಟರ್ ಸಿಬ್ಬಂದಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಕೇಂದ್ರ ಸರ್ಕಾರದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಜನಗಣತಿಯನ್ನು ಕಂಪ್ಯೂಟರ್‌ಗಳಲ್ಲಿ ದಾಖಲಿಸುವ ಸಿಬ್ಬಂದಿಗೆ ಗುತ್ತಿಗೆ ದಾರರು ಕಡಿಮೆ ಸಂಬಳ ನೀಡುತ್ತಿ ದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಟ್ಯಾಬೆಟ್ಲ್ ಪಿಸಿ ಆಪರೇಟರ್‌ಗಳು ಬುಧವಾರ ಪ್ರತಿಭಟನೆ ನಡೆಸಿದರು.ರಾಜ್ಯದಲ್ಲಿ ಬಿಇಎಲ್ ಕಂಪೆನಿಗೆ ಗಣತಿ ದಾಖಲಿಸುವ ಗುತ್ತಿಗೆ ನೀಡಲಾ ಗಿದೆ. ಗುತ್ತಿಗೆದಾರರ ಕಡೆಯಿಂದ ಕೆಲಸ ಮಾಡುವ ಕೆಲವು ಜಿಲ್ಲೆಗಳ ಆಪರೇಟರ್‌ಗಳಿಗೆ 40 ದಿನಗಳ ಕೆಲಸಕ್ಕೆ 6 ಸಾವಿರ ರೂಪಾಯಿಗಳಿಂದ 7 ಸಾವಿರ ಸಂಬಳ ನೀಡಲಾಗುತ್ತಿದೆ. ಆದರೆ ತಾಲ್ಲೂಕಿನಲ್ಲಿ ಕೆಲಸ ಮಾಡು ತ್ತಿರುವ 93 ಮಂದಿ ಗಣತಿದಾರರಿಗೆ ಕೇವಲ 4500 ರೂಪಾಯಿ ಸಂಬಳ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಗಣತಿ ಗುತ್ತಿಗೆ ಪಡೆದಿರುವ ಹಾಸನದ ರಮಾಕಾಂತ್ ಎಂಬುವರಿಂದ ತಾವುಗಳು ವಂಚನೆಗೆ ಒಳಗಾಗಿದ್ದೇವೆ ಎಂದು ಆರೋಪಿಸಿದರು.ಸ್ಥಳಕ್ಕೆ ಭೇಟಿ ನೀಡಿದ ಗುತ್ತಿಗೆ ಸಂಸ್ಥೆಯ ದೇವರಾಜ್ ಅವರಿಗೆ ಪ್ರತಿಭಟನಾಕಾರರು ದಿಗ್ಬಂಧನ ಹಾಕಿದರು. ರಮಾಕಾಂತ್ ಸ್ಥಳಕ್ಕೆ ಆಗಮಿಸಿ ನ್ಯಾಯಬದ್ಧವಾಗಿ ವೇತನ ನೀಡುವ ಭರವಸೆ ನೀಡುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಸ್ಥಳಕ್ಕೆ ಶಿರಸ್ತೇದಾರ್ ಗಜೇಂದ್ರ ಮೋಕ್ಷ, ತಹಶೀಲ್ದಾರ್ ಚಂದ್ರಮ್ಮ ಭೇಟಿ ನೀಡಿದರು. ಗುರುವಾರ ಬೆಳಗ್ಗೆ ಗುತ್ತಿಗೆದಾರ ರಮಾಕಾಂತ್ ಅವರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.`ಜನಸಂಖ್ಯೆ ಸಾಂದ್ರತೆ ಆಧಾರದ ಮೇಲೆ ಗಣತಿದಾರರಿಗೆ ಸಂಬಳ ನಿಗದಿ ಮಾಡಲಾಗಿದೆ. ವೇತನದಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ಗಣತಿದಾರರನ್ನು ನೇಮಕ ಮಾಡಿಕೊಳ್ಳುವ ಸಂದರ್ಭ ದಲ್ಲಿ ಇಷ್ಟೇ ಮೊತ್ತದ ಸಂಬಳ ನೀಡುವುದಾಗಿ ತಿಳಿಸಿ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ.

 

ಅನ್ಯಾಯ ಆಗಿದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬದಿತ್ತು, ಏಕಾಏಕಿ ಪ್ರತಿಭಟನೆಗೆ ಇಳಿದಿರುವುದು ಬೇಸರ ಉಂಟು ಮಾಡಿದೆ~ ಎಂದು ಗಣತಿ ಗುತ್ತಿಗೆದಾರರ ಕಡೆಯ ತಾಲ್ಲೂಕು ಸಂಯೋಜಕ ದೇವರಾಜ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.