ಕಡಿವಾಣ ಇಲ್ಲವೆ?

7

ಕಡಿವಾಣ ಇಲ್ಲವೆ?

Published:
Updated:

ದೆಹಲಿಯ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆ ಎಲ್ಲ ಹೆಣ್ಣುಮಕ್ಕಳನ್ನೂ ಬೆಚ್ಚಿಬೀಳಿಸುವಂಥದ್ದು. ಅದೂ ಸಾರ್ವಜನಿಕ ಸ್ಥಳದಲ್ಲಿ, ನಮ್ಮ ದೇಶದ ರಾಜಧಾನಿಯಲ್ಲಿ ಇಂಥ ಘಟನೆ ನಡೆದಿದೆ ಎಂದರೆ ಆರೋಪಿಗಳಿಗೆ ಎಂಥ ಮುಕ್ತ ವಾತಾವರಣ ದೊರೆತಿದೆ ನೋಡಿ.ದೇಶದಾದ್ಯಂತ ಹೆಣ್ಣುಮಕ್ಕಳ ಮೇಲೆ ಇಂಥ ಹೇಯ ಕೃತ್ಯಗಳು ಒಂದಲ್ಲಾ ಒಂದು ರೀತಿಯಲ್ಲಿ ಜರುಗುತ್ತಿರುವುದು ದುರಂತದ ಸಂಗತಿ.  ಕಳೆದ ಒಂದೆರಡು ತಿಂಗಳಲ್ಲಿ ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ, ಕೊಪ್ಪಳದ ಯುವತಿ, ಹಾಗೆ ಕೇರಳದ ಒಬ್ಬ ಬಾಲಕಿಯ ಮೇಲಿನ ಗುಂಪು ಅತ್ಯಾಚಾರಗಳು ಪ್ರಮುಖವಾಗಿ ಕಂಡುಬರುವಂತಹವು. ಇನ್ನು ಬೆಳಕಿಗೆ ಬರದ ಮತ್ತು ಬೆಳಕಿಗೆ ಬಂದರೂ ನಮ್ಮ ನಿಮ್ಮೆಲ್ಲರಿಂದ ದೂರ ಸರಿದು ಹೋಗುವ ಘಟನೆಗಳು ಇನ್ನೆಷ್ಟೋ?  ದೆಹಲಿಯಲ್ಲಿ ನಡೆದಿರುವಂತಹ ಘಟನೆಯಂತೂ ವಿದ್ಯಾರ್ಥಿನಿ- ಯುವತಿಯರಿಗೆ ಇನ್ನಷ್ಟು ಆತಂಕದ ವಾತಾವರಣವನ್ನು ಸಮಾಜದಲ್ಲಿ ಸೃಷ್ಟಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry