ಶನಿವಾರ, ಮೇ 28, 2022
31 °C

ಕಡೂರು ಪುರಸಭೆ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಭದ್ರಾ ನದಿಯಿಂದ ಕಡೂರು-ಬೀರೂರು ಪಟ್ಟಣಗಳಿಗೆ ಕುಡಿಯುವ ನೀರಿನ ಶಾಶ್ವತ ಯೋಜನೆಗೆ ಪಟ್ಟಣದಲ್ಲಿ ಪೈಪ್‌ಲೈನ್ ಅಳವಡಿಸಲು ಕಡೂರು -ಬೀರೂರು ಪುರಸಭೆ ಆಡಳಿತದಿಂದ 50 ಅಡಿಗಳ ರಸ್ತೆ ವಿಸ್ತರಣೆ ಕಾರ್ಯ ಮುಗಿದಿದ್ದು, ಕೆಡವಿದ ಕಟ್ಟಡಗಳ ಕಲ್ಲು, ಮಣ್ಣು ತೆಗೆಯದೇ ಇರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ವಾಹನ ಚಾಲಕರು ಮತ್ತು ಸಾರ್ವಜನಿಕರು ಪುರಸಭೆ ಆಡಳಿತವನ್ನು ಶಪಿಸುವಂತಾಗಿದೆ.ಕಟ್ಟಡಗಳನ್ನು ಏಕಾಏಕಿ ತೆರವು ಮಾಡಿದ ಪುರಸಭೆ ಮುಖ್ಯಾಧಿಕಾರಿ ಎರಡು ತಿಂಗಳಾದರೂ 50ಕ್ಕೂ ಹೆಚ್ಚಿನ ಕಟ್ಟಡಗಳ ಮುಂದೆ ಬಿದ್ದಿರುವ ಕಲ್ಲು ಮಣ್ಣಿನ ರಾಶಿಗೆ ಮಾತ್ರ ಮುಕ್ತಿ ಕಾಣಿಸಿಲ್ಲ. ಕಟ್ಟಡ ಮಾಲೀಕರೂ  ತೆಗೆಸಲು ಮುಂದಾಗುತ್ತಿಲ್ಲ. ಇತ್ತ ಪುರಸಭೆ ಸಹ ಗಮನ ಹರಿಸುತ್ತಿಲ್ಲ.ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಮಧ್ಯದಲ್ಲಿ ಹಾದು ಹೋಗಿರುವುದರಿಂದ ಪೊಲೀಸ್ ಅಧಿಕಾರಿಗಳು ಸಹ ತಲೆ ಕೆಡಿಸಿಕೊಳ್ಳದೆ ಇರು ವುದರಿಂದ ಶಾಲಾಮಕ್ಕಳು, ಸಾರ್ವಜನಿಕರು, ವಾಹನ ಚಾಲಕರ ಸುಗಮಸಂಚಾರಕ್ಕೆ ತೊಂದರೆ ಯಾಗಿದೆ.ಒಳಚರಂಡಿ ವ್ಯವಸ್ಥೆ ಮುಚ್ಚಿಹೋಗಿರುವುದರಿಂದ ಕೆಎಲ್‌ವಿ ವೃತ್ತ, ಬೀರೂರು ಬಸ್‌ಸ್ಟಾಂಡ್, ಗಣೇಶ ಆಂಜನೇಯ ದೇವಾಲಯ, ಮುಜುರಾಯಿ ಇಲಾಖೆಯ ಮಳಿಗೆಗಳ ಮುಂದಿನ ಮಣ್ಣಿನ ರಾಶಿ ಮಳೆಯ ನೀರು ಕಸದೊಂದಿಗೆ ರಸ್ತೆಗಳ ಮೇಲೆ ಹರಿಯುವುದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ.

 

ಮುಖ್ಯಾಧಿಕಾರಿ ವರ್ಗಾವಣೆಗೊಂಡು ಬೇರೆಡೆಗೆ ಹೋಗಿರುವುದರಿಂದ ಜಿಲ್ಲಾ ಆಡಳಿತವು ಇತ್ತ ಗಮನ ಹರಿಸಿ ಕಟ್ಟಡಗಳ ಅವಶೇಷಗಳನ್ನು ತೆಗೆಸಿದರೆ ಒಳ್ಳೆಯದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.  ಜುಲೈ  ಮೊದಲ ವಾರದೊಳಗೆ ಪುರಸಭೆ ಆಡಳಿತವು ಕಟ್ಟಡಗಳ ಅವಶೇಷಗಳನ್ನು ಸಾಗಿಸದಿದ್ದರೆ ಅನೇಕ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಮುಂದಾಗುವುದಾಗಿ ಪುರಸಭೆಯ ಆಡಳಿತಕ್ಕೆ ಎಚ್ಚರಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.