ಕಡೆಗೂ ಗುರಿ ಮುಟ್ಟಿದ ವಾಯುಪಡೆ ತಂಡ

ಶನಿವಾರ, ಜೂಲೈ 20, 2019
22 °C

ಕಡೆಗೂ ಗುರಿ ಮುಟ್ಟಿದ ವಾಯುಪಡೆ ತಂಡ

Published:
Updated:

ಕಠ್ಮಂಡು (ಐಎಎಫ್): ಭಾರತೀಯ ವಾಯುಪಡೆಯ 7 ಜನರ ತಂಡ ಮೌಂಟ್ ಎವರೆಸ್ಟ್ ಮೇಲೆ ಹಾರಿಸಿ ಬಂದ ತ್ರಿವರ್ಣ ಧ್ವಜವನ್ನು ನೇಪಾಳದಲ್ಲಿರುವ ಭಾರತೀಯ ರಾಯಭಾರಿ ರಾಕೇಶ್ ಸೂದ್ ಅವರಿಗೆ ಒಪ್ಪಿಸುವುದರೊಂದಿಗೆ ಪರ್ವತಾರೋಹಣವನ್ನು ಯಶಸ್ವಿಯಾಗಿ ಪೂರೈಸಿತು.6 ವರ್ಷಗಳ ಹಿಂದೆ ವಾಯುಪಡೆಯ ಇತಿಹಾಸದಲ್ಲೇ ಮೊದಲ ಬಾರಿಗೆ 14 ಜನರ ತಂಡ ಎವರೆಸ್ಟ್ ಹತ್ತುವ ಸಾಹಸಕ್ಕೆ ಮುಂದಾಗಿತ್ತು. ಆದರೆ ಕರ್ನಾಟಕದವರಾದ ಸ್ಕ್ವಾಡ್ರನ್ ಲೀಡರ್ ಚೈತನ್ಯ ಅವರು ಕೊರಕಲು ಇಳುಕಲಿನಲ್ಲಿ ಆಮ್ಲಜನಕದ ಕೊರತೆಯಿಂದ ಹಿಮಗಾಳಿಗೆ ಬಲಿಯಾಗಿದ್ದರು. ಆ ತಂಡದಲ್ಲಿ ಮೂವರು ಆಗ ಸಾಧನೆ ಪೂರ್ಣಗೊಳಿಸಿದ್ದರಾದರೂ, ಸಹೋದ್ಯೋಗಿಯ ಸಾವಿನ ಕಹಿನೆನಪಿನಲ್ಲಿ ಅದಕ್ಕೆ  ಸೂತಕದ ಛಾಯೆ ಆವರಿಸಿಕೊಂಡಿತ್ತು. ಇದೀಗ ಆರು ವರ್ಷಗಳ ಬಳಿಕ ಇದೇ ತಂಡದ 7 ಜನ ಛಲ ಬಿಡದೆ ತಮ್ಮ ಗುರಿ ಮುಟ್ಟಿದ್ದಾರೆ.ಕ್ಯಾಪ್ಟನ್ ನರೇಂದ್ರ ಕುಮಾರ್ ದಹಿಯಾ ನೇತೃತ್ವದ ತಂಡದಲ್ಲಿ ಮೂವರು ಮಹಿಳೆಯರಿದ್ದರು. ಇವರಲ್ಲಿ ಮೊದಲು ಗುರಿ ಮುಟ್ಟಿದ ಫ್ಲೈಟ್ ಲೆಫ್ಟಿನೆಂಟ್ ನಿವೇದಿತಾ ಚೌಧರಿ ವಾಯುಪಡೆಯಲ್ಲಿ ಎವರೆಸ್ಟ್ ಏರಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜಸ್ತಾನದ ಈ ಯುವತಿ ಶಿಖರ ಹತ್ತುವ ಸಲುವಾಗಿ ತಮ್ಮ ಮದುವೆಯನ್ನೂ ಮುಂದೂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry