ಬುಧವಾರ, ನವೆಂಬರ್ 20, 2019
23 °C

ಕಡ್ಡಾಯ ಮತದಾನ: ಪ್ರತಿಜ್ಞೆ

Published:
Updated:

ಗುಲ್ಬರ್ಗ: ಚುನಾವಣೆಯು ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಸಂವಿಧಾನಾತ್ಮಕ ಹಕ್ಕು ಸಿಕ್ಕಿರುವುದು ಹೆಮ್ಮೆ ಅನಿಸುತ್ತಿದೆ ಎಂದು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ನಂದಿನಿ ಹೇಳಿದರು.ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕಡ್ಡಾಯ ಮತದಾನ ಮಾಡುವ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿರುವ ಸಾರ್ವಜನಿಕರು ಮತದಾನ ಮಾಡಲು ಹಿಂದೇಟು ಹಾಕುವುದು ಮತ್ತು ನಿರ್ಲಕ್ಷ್ಯ ತೋರುವ ಭಾವನೆ ಸರಿಯಾದುದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಎಲರ‌್ಲೂ ನಿರ್ಭೀತಿಯಿಂದ ಹಾಗೂ ಆಸಕ್ತಿಯಿಂದ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು. ಇನ್ನೊಬ್ಬ ವಿದ್ಯಾರ್ಥಿನಿ ಅಶ್ವಿನಿಯೂ ಮಾತನಾಡಿದರು.ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಪಲ್ಲವಿ ಆಕುರಾತಿ ಮಾತನಾಡಿ ವಿದ್ಯಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಾವು ಮತದಾನ ಮಾಡಬೇಕಲ್ಲದೆ  ತಮ್ಮ ಪಾಲಕರಿಗೂ ಹಾಗೂ ಓಣಿಗಳ ಇತರರಿಗೂ ಕಡ್ಡಾಯ ಮತದಾನ ಮಾಡುವಂತೆ ಪ್ರೇರೇಪಿಸಿ ಅಳಿಲು ಸೇವೆ ಮಾಡಬೇಕು ಎಂದರು. ವಿದ್ಯಾರ್ಥಿಗಳ ಪಾಲಕರಿಗೆ ಕಡ್ಡಾಯ ಮತದಾನದ ಪ್ರತಿಜ್ಞೆಯನ್ನು ಬೋಧಿಸಿದರು.ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಪಿ. ಶಂಕರ್, ಸರ್ವಶಿಕ್ಷಣ ಅಭಿಯಾನದ ಜಿಲಾ ್ಲಸಮನ್ವಯಾಧಿಕಾರಿ ಎಸ್.ಎಸ್. ಮುಧೋಳ, ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ಕೋಬಾಳಕರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಜಿ. ಚಂದ್ರಕಾಂತ್ ಹಾಜರಿದ್ದರು. ನಂತರ ಸ್ವೀಪ್ ಅಧ್ಯಕ್ಷೆ ಕೋಟನೂರು(ಡಿ) ಮತ್ತು ಹೀರಾಪುರ ಸರ್ಕಾರಿ ಪ್ರಾಥಮಿಕ ಶಾಲೆಗೂ ಭೇಟಿ ನೀಡಿ ಶಾಲಾ ಮಕ್ಕಳ ಪಾಲಕರಿಂದ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಜರುಗಿದ ಬಗ್ಗೆ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)