ಕಣಬೂರ ರಾಚೋಟೇಶ್ವರ ಜಾತ್ರೆ ಇಂದಿನಿಂದ

7

ಕಣಬೂರ ರಾಚೋಟೇಶ್ವರ ಜಾತ್ರೆ ಇಂದಿನಿಂದ

Published:
Updated:

ವಿಜಾಪುರ: ತಾಲ್ಲೂಕಿನ ಕಣಬೂರ ಗ್ರಾಮದಲ್ಲಿ ರಾಚೋಟೇಶ್ವರ ಜಾತ್ರೆಯ ಅಂಗವಾಗಿ ಇದೇ 15 ರಿಂದ 21ರ ವರೆಗೆ ವಿವಿಧ ಕಾರ್ಯಕ್ರಮ ಜರುಗಲಿವೆ.15 ರಂದು ಸಂಜೆ 4ಕ್ಕೆ ಗಂಗಾವತಿಯ ಪ್ರಾಣೇಶ್, ಬಸವರಾಜ ಮಹಾಮನೆ, ನರಸಿಂಹ ಜೋಶಿ ಅವರಿಂದ ನಗೆಹಬ್ಬ ನಡೆಯಲಿದ್ದು, ಹಣಮಂತ ಕೋರಡ್ಡಿ ಉದ್ಘಾಟಿಸುವರು. ಮರೇಗುದ್ದಿಯ ಅಡವಿಮಠದ ಗುರುಪಾದ ಸ್ವಾಮೀಜಿ, ಜೈನಾಪುರದ ರೇಣುಖ ಶಿವಾಚಾರ್ಯರು,  ಜಂಬಗಿಯ ಅಡವಿಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು.16 ರಂದು ಸಂಜೆ 4ಕ್ಕೆ ಧಾರ್ಮಿಕ ಭಾವೈಕ್ಯ ಚಿಂತನಗೋಷ್ಠಿ ಜರುಗಲಿದ್ದು, ಬೂದಿಹಾಳದ ಪ್ರಭು ಸ್ವಾಮೀಜಿ ಸಾನಿಧ್ಯ, ಜೈನಾಪುರ ಹಿರೇಮಠದ ರೆಣುಕ ಶಿವಾಚಾರ್ಯರು ನೇತೃತ್ವ ವಹಿಸುವರು. ಸುಭಾಸ ಎಚ್. ಬಿದರಿ ಅಧ್ಯಕ್ಷತೆ ವಹಿಸುವರು. ವೀರಭದ್ರಸ್ವಾಮಿ ಉದ್ಘಾಟಿಸುವರು. ಕುಂಠೋಜಿಯ ಚನ್ನವೀರದೇವರು  ಉಪನ್ಯಾಸ ನೀಡುವರು.17 ರಂದು ಬೆಳಿಗ್ಗೆ 9ಕ್ಕೆ ಮಹಾದ್ವಾರದ ಅಡಿಗಲ್ಲು ಸಮಾರಂಭವು ಉಜ್ಜಯನಿಯ ಜಗದ್ಗುರುಗಳಿಂದ ನೆರವೇರುವುದು. 10ಕ್ಕೆ ಸಿದ್ದಲಿಂಗ ಶಿವಾರ್ಯರ ಪುರಪ್ರವೆಶ, ಅಡ್ಡಪಲ್ಲಕ್ಕಿ ಉತ್ಸವ, ನಂತರ ಲಕ್ಷದೀಪೋತ್ಸವ, ಧರ್ಮಸಭೆ ನಡೆಯುವುದು.19 ರಂದು ಮಧ್ಯಾಹ್ನ 3ಕ್ಕೆ ನಡೆಯುವ ಧಾರ್ಮಿಕ ಭಾವೈಕ್ಯ ಚಿಂತನಗೋಷ್ಠಿಯನ್ನು ಸಚಿವ ಗೋವಿಂದ ಕಾರಜೋಳ ಉದ್ಘಾಟಿಸುವರು. ಶಾಸಕ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು.20 ರಂದು ಬೆಳಿಗ್ಗೆ 10ಕ್ಕೆ ಧರ್ಮಸಭೆಯನ್ನು ಜೆಡಿಎಸ್ ಮುಖಂಡ ವಿಜಯಕುಮಾರ ಪಾಟೀಲ ಉದ್ಘಾಟಿಸುವರು. ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆ ವಹಿಸುವರು.21 ರಂದು ಬೆಳಗ್ಗೆ 8ಕ್ಕೆ ಪಲ್ಲಕ್ಕಿ ಮಹೋತ್ಸವ, ಮಧ್ಯಾಹ್ನ 12ಕ್ಕೆ ಅಗ್ನಿಪ್ರವೇಶ, ಮಹಾಪ್ರಸಾದ ವಿತರಣೆ, ಸಂಜೆ 4ಕ್ಕೆ ಗಲಗಲಿಯ ರಮೆಶ ಪಲ್ಲೇದ ಅವರಿಂದ ಜಾದೂ ಪ್ರದರ್ಶನ, ರಾತ್ರಿ ನಾಟಕ ಪ್ರದರ್ಶನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry