ಕಣ್ಣಿಗೆ ಕಟ್ಟಿದ ದ್ರೌಪದಿ ಪ್ರತಾಪ

7

ಕಣ್ಣಿಗೆ ಕಟ್ಟಿದ ದ್ರೌಪದಿ ಪ್ರತಾಪ

Published:
Updated:

ಕಲಾಕದಂಬ ಸಂಸ್ಥೆಯು ತನ್ನ `ಮಾಸದ ಮೆಲುಕು~ ಸರಣಿ ಕಾರ್ಯಕ್ರಮದಲ್ಲಿ ಪೌರಾಣಿಕ ಆಖ್ಯಾನ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿತ್ತು.

ಕುರುಕ್ಷೇತ್ರ ಯುದ್ಧದ ಚಿತ್ರಣದೊಂದಿಗೆ, ಗೃಹ ಕಲಹ ಹೇಗೆ ಸಂಬಂಧಗಳನ್ನು ಹೊಸೆಯುವುದಕ್ಕೋ -ಮಸೆಯುವುದಕ್ಕೋ ಕಾರಣವಾಗುತ್ತದೆ, ವೈಯಕ್ತಿಕ ಪ್ರತಿಷ್ಠೆ ಹೇಗೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ ಎನ್ನುವುದನ್ನು ಪ್ರದರ್ಶನ ಅಚ್ಚುಕಟ್ಟಾಗಿ ನಿರೂಪಿಸಿತು.ಅರ್ಜುನನ ಪಾತ್ರದಲ್ಲಿ ಅಂಬರೀಷ್, ಭೀಮನಾಗಿ ಸುರೇಶ್ ತಂತ್ರಾಡಿ, ದ್ರೌಪದಿಯ ವೇಷಧಾರಿ ಸುಬ್ರಾಯ ಹೆಬ್ಬಾರ್, ಕೃಷ್ಣನ ಪಾತ್ರಧಾರಿ ರಾಧಾಕೃಷ್ಣ ಉರಾಳ ಎಲ್ಲರೂ ಸ್ವಾರಸ್ಯಪೂರ್ಣವಾಗಿ ಪ್ರೇಕ್ಷಕರನ್ನು ರಂಜಿಸಿದರು. ಕೆ.ಎನ್.ಅಡಿಗರು ಬಲರಾಮ ವೇಷಧಾರಿಯಾಗಿ, ಸುಭಾಷ್ ಹಾಗೂ ಋತ್ವಿಕ್ ಕಾಳಿ ಚಂಡಿಯರಾಗಿ ಯಕ್ಷಗಾನದ ರಂಗಪ್ರವೇಶ ಮಾಡಿದರು.ಶಂಕರ ಬಾಳಕುದ್ರು, ರಾಜೇಶ್, ಶ್ರೀನಿವಾಸ ಪ್ರಭು, ಅವರ ಹಿಮ್ಮೇಳ ಸಂಭ್ರಮಕ್ಕೆ ಯಕ್ಷಗಾನದಲ್ಲಿ ಹೊಸ ಪ್ರಯೋಗವೆನಿಸಿದ ಜಿಮ್ಮಟಿಕೆ ನಾಗರಾಜ್ ಅವರ ಮೋರ್ಚಿಂಗ್ ವಾದನ ಯಕ್ಷ ಸನ್ನಿವೇಶಗಳಿಗೆ ವಿಶೇಷ ಮೆರುಗು ನೀಡಿತ್ತು. ಸುಭದ್ರೆ ಹಾಗೂ ಪಾರ್ವತಿಯಾಗಿ ರಾಧಾಕೃಷ್ಣ ಬೆಳೆಯೂರು, ಶಿವನ ಪಾತ್ರದಲ್ಲಿ  ಶ್ರೀಧರ ತಂತ್ರಾಡಿ ಕಥೆಗೆ ಪೂರಕವಾಗಿ ಪ್ರದರ್ಶನ ನೀಡಿದರು.ಪತ್ರಕರ್ತ ರಾಜು ಮೊಳಹಳ್ಳಿ, ಶಿವಳ್ಳಿ ಸ್ಮಾರ್ಥ ಬ್ರಾಹ್ಮಣರ ಮಹಾಪರಿಷತ್ ಕಾರ್ಯನಿರ್ವಾಹಕ ಕಾರ್ಯದರ್ಶಿ ವಿನೋದ ಅಡಿಗ, ಶನೈಶ್ಚರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವೆಂಕಟಸ್ವಾಮಿ ರಾಜು, ಸಿದ್ಧಿ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಅವರು ಪ್ರದರ್ಶನದಲ್ಲಿ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry