ಕಣ್ಣು ತಪಾಸಣೆ ಶಿಬಿರ

7

ಕಣ್ಣು ತಪಾಸಣೆ ಶಿಬಿರ

Published:
Updated:
ಕಣ್ಣು ತಪಾಸಣೆ ಶಿಬಿರ

ನಾರಾಯಣ ನೇತ್ರಾಲಯ ಸಹಯೋಗದೊಂದಿಗೆ ಟಿ.ಜಾನ್ ಕಾಲೇಜು ಎನ್‌ಎಸ್‌ಎಸ್ ಘಟಕದ ವತಿಯಿಂದ ಸುಭಾಷನಗರ ಗ್ರಾಮದಲ್ಲಿ ಇತ್ತೀಚೆಗೆ ಉಚಿತ ಕಣ್ಣು ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ತಪಾಸಣೆಗೆ ಒಳಗಾದ 95 ಮಂದಿಗೆ ಕನ್ನಡಕ ಧರಿಸುವಂತೆ ಸೂಚಿಸಲಾಯಿತು. 20 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಯಿತು ಹಾಗೂ ಅವರಿಗೆ ಕನ್ನಡಕ ಧರಿಸಲು ಸಲಹೆ ನೀಡಲಾಯಿತು. ಗ್ರಾಮದ ಜನರಿಗೆ ಈ ಕನ್ನಡಕಗಳನ್ನು ವಿತರಿಸಲಾಯಿತು. ಯೂತ್ ಫಾರ್ ಸೇವಾ ಎಂಬ ಸ್ವಯಂ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಫಿಲಿಪ್ಸ್ ಇಂಡಿಯಾ ಲಿ. ಉಚಿತ ಕನ್ನಡಕ ವಿತರಿಸುವ ಪ್ರಾಯೋಜಕತ್ವ ಹೊಂದಿತ್ತು.

ಟಿ. ಜಾನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಅಧ್ಯಕ್ಷ ಡಾ. ಥಾಮಸ್ ಪಿ. ಜಾನ್ ಮಾತನಾಡಿ, `ಈ ಚಟುವಟಿಕೆಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಮಾಜಿಕ ಕರ್ತವ್ಯವನ್ನು ಅರಿಯಲು ಸಹಾಯ ಮಾಡಿದೆ. ಸಮರ್ಥನೀಯತೆ ಕುರಿತ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಣ ಸಂಸ್ಥೆ ಬದ್ಧವಾಗಿದೆ. ಸುತ್ತಲಿನ ಸಮುದಾಯದವರ ಆರೋಗ್ಯ ಅಭಿವೃದ್ಧಿ, ಬಡವರು ಹಾಗೂ ಅವಕಾಶ ವಂಚಿತರಿಗೆ ನೆರವು ನೀಡುವುದು ಕಾರ್ಯಕ್ರಮದ ಉದ್ದೇಶ~ ಎಂದರು.  ಫಿಲಿಪ್ಸ್ ಇಂಡಿಯಾ ಲಿ. ನಿರ್ದೇಶಕ ಆರ್. ಡಿ. ವಿಕ್ರಂ, ಸಿಐಎಸ್ ಸಂಯೋಜಕರು, ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂಸೇವಕರು, ಶ್ರಿರಾಂ ರಾಮಕೃಷ್ಣ, ನಾರಾಯಣ ನೇತ್ರಾಲಯದ ಕಣ್ಣಿನ ತಜ್ಞರು ಹಾಗೂ ಲೋಕಸೇವಾ ಆಪ್ಟಿಷಿಯನ್ಸ್‌ನ ಪ್ರತಿನಿಧಿಗಳ ಸಮ್ಮುಖದಲ್ಲಿ ಕನ್ನಡಕಗಳನ್ನು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry