ಕಣ್ಣು ತಪ್ಪಿಸಿ ಚಿನ್ನ ಕದ್ದ ಕಳ್ಳರು !

ಶನಿವಾರ, ಜೂಲೈ 20, 2019
24 °C

ಕಣ್ಣು ತಪ್ಪಿಸಿ ಚಿನ್ನ ಕದ್ದ ಕಳ್ಳರು !

Published:
Updated:

ಚಿಂತಾಮಣಿ: ವ್ಯಾಪಾರ ಮಾಡುವ ನೆಪದಲ್ಲಿ ಮೂವರು ಅಪರಿಚಿತರು ಅಂಗಡಿ ಮಾಲೀಕನ ಕಣ್ಣು ತಪ್ಪಿಸಿ 180 ಗ್ರಾಂ ಚಿನ್ನದ ಆಭರಣ ದೋಚಿದ ಘಟನೆ ನಗರದ ಸೌಂದರ್ಯ ಫ್ಯಾಷನ್ ಷೋ ಅಂಗಡಿಯಲ್ಲಿ ಬುಧವಾರ ಜರುಗಿದೆ.ಈ ಅಂಗಡಿಯಲ್ಲಿ ಬಟ್ಟೆ ಹಾಗೂ ಚಿನ್ನದ ವ್ಯಾಪಾರ ಎರಡು ನಡೆಯುತ್ತಿದೆ.ಘಟನೆ ಹಿನ್ನೆಲೆ: ಇಬ್ಬರು ಯುವಕರು ಮತ್ತು ಒಬ್ಬ ಯುವತಿ ಸೇರಿ ಮೂವರು ಜನರು ವ್ಯಾಪಾ ರಕ್ಕಾಗಿ ಅಂಗಡಿಗೆ ಬಂದಿದ್ದಾರೆ. ಇವರಿಗಿಂತ ಮೊದಲೇ ಬಂದಿದ್ದವರು ಚಿನ್ನದ ಓಲೆ ಮತ್ತು ಸರ ಖರೀದಿಸಲು ನಿಂತಿದ್ದರು. ನಂತರ ಬಂದವರು ಬಟ್ಟೆ ತೋರಿಸುವಂತೆ ಹೇಳಿದ್ದಾರೆ. ಆಗ  ಮಾಲೀಕ ಚಿನ್ನದ ಆಭರಣಗಳನ್ನು ಅಲ್ಲೇ ಪಕ್ಕದಲ್ಲಿಟ್ಟು ಬಟ್ಟೆ ತೋರಿಸಲು ಹೋದಾಗ ಯುವತಿ ಬಟ್ಟೆಯನ್ನು ತನಗೆ ಅಳತೆಯ ನೆಪದಲ್ಲಿ ಯುವಕರಿಗೆ ಅಡ್ಡವಾಗಿ ನಿಂತುಕೊಂಡಿದ್ದಾಳೆ. ಹಿಂದೆ ನಿಂತಿದ್ದ ಯುವಕರು ಚಿನ್ನದ ಒಡವೆಗಳನ್ನು ಅಪಹರಿಸಿದ್ದಾರೆ.ನಂತರ ವ್ಯಾಪಾರ ಕುದುರದೆ ಮೂವರು ಕ್ಷಣಾರ್ಧದಲ್ಲಿ ಹೊರಟು ಹೋಗಿದ್ದಾರೆ. ಮಾಲೀಕ ಈ ಕಡೆ ಬಂದು ನೋಡಿದಾಗ ಚಿನ್ನದ ಆಭರಣಗಳು ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್ ಮತ್ತು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಮೇಶ್‌ಬಾನೂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry