ಕಣ್ಣು ದಾನಕ್ಕೆ ಪ್ರತಿಜ್ಞೆ

7

ಕಣ್ಣು ದಾನಕ್ಕೆ ಪ್ರತಿಜ್ಞೆ

Published:
Updated:
ಕಣ್ಣು ದಾನಕ್ಕೆ ಪ್ರತಿಜ್ಞೆ

ಹೆಣ್ಣೂರಿನ ಕೋಶೀಸ್ ಸಮೂಹ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಆ ಸಂಜೆ ನಡೆದ ಸಂಗೀತ ಕಾರ್ಯಕ್ರಮ ವಿಶಿಷ್ಟ ಮತ್ತು ಅವಿಸ್ಮರಣೀಯವಾಗಿತ್ತು. ಏಕೆಂದರೆ ಇದನ್ನು ನಡೆಸಿಕೊಟ್ಟವರು ಇಟ್ರೋಡ್ ಸಂಸ್ಥೆಯ ಅಂಧ ಕಲಾವಿದರು. ಇವರ ಸಂಗೀತ ಪ್ರತಿಭೆ ಆಲಿಸಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಹೃದಯ ತುಂಬಿಬಂದಿತ್ತು. ಕೃತಜ್ಞತೆಯ ರೂಪದಲ್ಲಿ ಸ್ವಪ್ರೇರಣೆಯಿಂದ ನಿಧಿ ಸಂಗ್ರಹಿಸಿ ಅಂಧರ ಕಲ್ಯಾಣಕ್ಕಾಗಿ ಇಟ್ರೋಡ್‌ಗೆ ನೀಡಿದರು. ಅಲ್ಲದೆ ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಿದರು. ಡಾ.ಎಂ.ವಿ. ರವಿಕುಮಾರ್ ಸಮಾರಂಭ ಉದ್ಘಾಟಿಸಿದರು. ಕೋಶೀಸ್‌ನ ನಿರ್ವಹಣಾ ನಿರ್ದೇಶಕ ಪಿ. ಹರೀಂದ್ರನ್ ಅಧ್ಯಕ್ಷತೆ ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry