ಶುಕ್ರವಾರ, ಜನವರಿ 17, 2020
20 °C

ಕಣ್ತೆರೆದು ನೋಡು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಧರೂ ಸಾಮಾನ್ಯ ವ್ಯಕ್ತಿಯಂತೆ ಸರಾಗವಾಗಿ  ಓದುವುದಕ್ಕೆ ಸಾಧ್ಯವಾಗಿದ್ದು ಬ್ರೈಲ್ ಲಿಪಿಯಿಂದ. ಅಂಧರ ಬಾಳಿಗೆ ಹೊಸ ಹುಮ್ಮಸ್ಸು ನೀಡಿದ ಬ್ರೈಲ್ ಲೂಯಿಸ್‌ನ ಜನ್ಮದಿನಾಚರಣೆ ಪ್ರಯುಕ್ತ ಜನವರಿ 4 ರಂದು ಅಂತರ್‌ರಾಷ್ಟ್ರೀಯ ಬ್ರೈಲ್ ದಿನವನ್ನಾಗಿ ಆಚರಿಸಲಾಗುತ್ತದೆ.ಅಂಧರು ವಿದ್ಯಾವಂತರಾಗಲು ಸಹಕಾರಿಯಾಗುವ ಬ್ರೈಲ್ ಲಿಪಿ (ಉಬ್ಬು ಬರಹ)ಯನ್ನು ಜಗತ್ತಿಗೆ ಪರಿಚಯಿಸಿದ ಲೂಯಿಸ್ ಬ್ರೈಲ್‌ನ ನೆನಪಿಗಾಗಿ ಪ್ರಪಂಚದಾದ್ಯಂತ ಜನವರಿ 4ರಂದು ಆತನ ಜನ್ಮದಿನವನ್ನು ಆಚರಿಸುತ್ತಾರೆ. ಚೆಶೈರ್ ಟ್ರಸ್ಟ್ ಕೂಡ ಜನ್ಮದಿನವನ್ನು ಸಡಗರದಿಂದ ಆಚರಿಸುತ್ತಿದೆ. ಬ್ರೈಲ್ ಲಿಪಿಯೊಂದನ್ನು ಕಲಿತರೆ ಎಲ್ಲಾ ಕ್ಷೇತ್ರಗಳಲ್ಲೂ ಅವರಿಗೆ ಉದ್ಯೋಗ ಸಿಗುವುದಿಲ್ಲ ಎಂಬುದನ್ನು ಮನಗಂಡ ಟ್ರಸ್ಟ್, ಮುಂದುವರೆದು ಅಸಿಸ್ಟಿವ್ ಟೆಕ್ನಾಲಜಿಯನ್ನು ಕಲಿಸಲು ಮುಂದಾಗಿದೆ. ಉದ್ಯೋಗದಲ್ಲಿ ಇರುವವರು, ವಿದ್ಯಾಭ್ಯಾಸದಲ್ಲಿರುವ ಅಂಧರು ಈ ಉಪಯೋಗ ಪಡೆದುಕೊಳ್ಳಬಹುದು.ಲಿಪಿಯನ್ನು ಸೂಕ್ತ ರೀತಿಯಲ್ಲಿ ಬಳಕೆಗೆ ತರಲು ಮತ್ತು ಸಂವಹನವನ್ನು ಹೆಚ್ಚಿಸುವ ಉದ್ದೇಶದಿಂದ ಅಸಿಸ್ಟಿವ್ ಟೆಕ್ನಾಲಜಿ ಅಭಿವೃದ್ಧಿ ಅಂಶದ ಬಗ್ಗೆ ಮಾಹಿತಿ ನೀಡುತ್ತದೆ.

ಉಚಿತ ಕಂಪ್ಯೂಟರ್ ಶಿಕ್ಷಣದ ಜೊತೆಗೆ ಉದ್ಯೋಗ ಕೊಡಿಸುವಲ್ಲಿ ಸಹಕಾರ ನೀಡಲಿದ್ದಾರೆ.ಈ ನಿಟ್ಟಿನಲ್ಲಿ ಟ್ರಸ್ಟ್ ಅಂಧರ ಬಾಳಲ್ಲಿ ಉತ್ಸಾಹ ತುಂಬಲು ಮುಂದಾಗಿದೆ.ಸ್ಥಳ: ಚೆಶೈರ್ ಡಿಸೆಬಿಲಿಟಿ ಟ್ರಸ್ಟ್, ನಂ34, 6ನೇ ಮುಖ್ಯರಸ್ತೆ, ಎಚ್‌ಎಎಲ್ 2ನೇ ಹಂತ.

ಮಾಹಿತಿಗೆ: 99008 34505

ಪ್ರತಿಕ್ರಿಯಿಸಿ (+)