ಸೋಮವಾರ, ಡಿಸೆಂಬರ್ 16, 2019
17 °C

ಕಣ್ಮನ ಸೆಳೆದ ಪೊನ್ನುಮುತ್ತಪ್ಪ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಸಮೀಪದ ಹಳೆತಾಲೂಕಿನ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಶುಕ್ರವಾರ ಬೆಳಿಗ್ಗೆ ಕುಟ್ಟಿಚಾತ, ತಿರುವಪ್ಪನೆ ಮತ್ತು ಮುತ್ತಪ್ಪ ಕೋಲಗಳನ್ನು ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿದರು. ಇದಕ್ಕೂ ಮುನ್ನ ಗುರುವಾರ ಸಂಜೆ ಮುತ್ತಪ್ಪ ದೇವರ ತೀರ್ಥಸ್ನಾನ ಕಾವೇರಿ ನದಿಯಲ್ಲಿ ಜರುಗಿತು. ಬಳಿಕ ಕೇರಳದ ಚಂಡೆಯೊಂದಿಗೆ ನಾಪೋಕ್ಲು ಪಟ್ಟಣದಲ್ಲಿ ಮೆರವಣಿಗೆ ನಡೆಯಿತು. ಪಟ್ಟಣದಲ್ಲಿ ಜರುಗಿದ ಕೇರಳದ ಆಕರ್ಷಕ ಚಂಡೆ ಹಾಗೂ ನರ್ತನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ವೀಕ್ಷಿಸಿದರು. ನಂತರ ದೇವಾಲಯದಲ್ಲಿ ದೇವರ ಬೊಳ್ಳಾಟಂ, ಕುಟ್ಟಿಚಾತ ಬೊಳ್ಳಾಟಂ ಗುಳಿಗ ಕೋಲಗಳು ಜರುಗಿದವು. ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಬುಧವಾರ ಗಣಪತಿ ಹೋಮ, ದೇವಿ ಪೂಜೆ ಹಾಗೂ ಗುರುಪೂಜೆ ಗಳೊಂದಿಗೆ ಆರಂಭಗೊಂಡ ಪೂಜಾ ಕಾರ್ಯಕ್ರಮಗಳು ಶುಕ್ರವಾರ ಹಲವು ಪೂಜಾ ವಿಧಿವಿಧಾನಗಳೊಂದಿಗೆ ಮುಕ್ತಾಯಗೊಂಡವು. ಪೊನ್ನು ಮುತ್ತಪ್ಪ ದೇವಾಲಯವನ್ನು ಭಕ್ತಾದಿಗಳ ನೆರವಿನಿಂದ ಕಳೆದವರ್ಷ ನವೀಕರಣಗೊಳಿಸಲಾಗಿತ್ತು.ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಉತ್ಸವದ ಯಶಸ್ಸಿಗೆ ಸಂಪೂರ್ಣವಾಗಿ ತೊಡಿಗಿಸಿಕೊಂಡರು.

ಪ್ರತಿಕ್ರಿಯಿಸಿ (+)