ಕಣ್ಮರೆಯಾದ ವಿಮಾನ ಅಪಘಾತ-22 ಸಾವು

7

ಕಣ್ಮರೆಯಾದ ವಿಮಾನ ಅಪಘಾತ-22 ಸಾವು

Published:
Updated:

ಕಠ್ಮಂಡು (ಪಿಟಿಐ): ನೇಪಾಳದಲ್ಲಿ ಬುಧವಾರ ಕಣ್ಮರೆಯಾಗಿದ್ದ ಖಾಸಗಿ ವಿಮಾನ ಇಲ್ಲಿಗೆ ಸಮೀಪದ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ವಿದೇಶಿಯರು ಸೇರಿದಂತೆ 22ಮಂದಿ ಮೃತಪಟ್ಟಿದ್ದಾರೆ.ಪೂರ್ವ ನೇಪಾಳದ ಖೊತಾಂಗ್ ಜಿಲ್ಲೆಯ ಲಮಿದಂಡಾ ವಿಮಾನನಿಲ್ದಾಣದಿಂದ ಹೊರಟ ಈ ವಿಮಾನ ಬುಧವಾರ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ಕೇಂದ್ರದ ಸಂಪರ್ಕ ಕಡಿದುಕೊಂಡಿತ್ತು. ಪತ್ತೆ ಕಾರ್ಯಕ್ಕಾಗಿ ಬಳಸಿದ ಎರಡು ಹೆಲಿಕಾಪ್ಟರ್‌ಗಳು ಈ ವಿಮಾನ ಅಪಘಾತಕ್ಕೀಡಾಗಿರುವುದನ್ನು ಗುರುವಾರ ಮುಂಜಾನೆ ಪತ್ತೆ ಮಾಡಿವೆ.ಕಠ್ಮಂಡು ಸಮೀಪದ ದಟ್ಟ ಅರಣ್ಯದಲ್ಲಿ ವಿಮಾನದ ಅವಶೇಷಗಳು 200 ಮೀಟರ್ ಜಾಗದಲ್ಲಿ ಹರಡಿವೆ. 20 ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದು ಉಳಿದ ಎರಡು ಶವಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಮೂವರು ಸಿಬ್ಬಂದಿ ಸೇರಿ 19 ಮಂದಿಯಿದ್ದ ವಿಮಾನವು ಬುಧವಾರ ಮಧ್ಯಾಹ್ನ 3.40ಕ್ಕೆ  ಲಮಿದಂಡಾ ವಿಮಾನ ನಿಲ್ದಾಣದಿಂದ  ಕಠ್ಮಂಡುವಿಗೆ ಹೊರಟಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry